ನಾಗರಿಕಸನ್ನದು

ನಮ್ಮ ಧ್ಯೇಯ

ಜವಳಿ ಕ್ಷೇತ್ರವನ್ನು ಸಶಕ್ತ, ಕಾರ್ಯನಿರತ ಹಾಗೂ ಬೆಳವಣಿಗೆ ಪೂರಕದೊಂದಿಗೆ ಅಭಿವೃದ್ಧಿಪಡಿಸುವುದು ಧ್ಯೇಯವಾಗಿದೆ.

ನಮ್ಮ ಬದ್ಧತೆ
 • ಕೈಮಗ್ಗ, ವಿದ್ಯುತ್ ಮಗ್ಗ, ರೇಷ್ಮೆ, ಉಣ್ಣೆ, ಮಿಲ್ಸ್ ಹಾಗೂ ಸಿದ್ಧ ಉಡುಪು ವಲಯಗಳ ಸರ್ವತೋಮುಖ ಅಭಿವೃದ್ಧಿ ಹಾಗೂ ಬೆಳವಣಿಗೆಗೆ ಕಾರ್ಯನಿರತವಾಗುವುದು.
 • ಜವಳಿ ಕ್ಷೇತ್ರದ ಭಾಗಿದಾರರ ಸಮಸ್ಯೆಗಳನ್ನು ಸತತವಾಗಿ ವಿಚಾರ ವಿನಿಮಯದೊಂದಿಗೆ ತಿಳಿದುಕೊಂಡು ಸಮಸ್ಯೆಗಳ ಪರಿಹಾರಕ್ಕಾಗಿ ಸೂಕ್ತ ಮಾರ್ಗದರ್ಶನ ಹಾಗೂ ಪರಿಣಾಮಕಾರಿಯಾಗಿ ಸಾಮರ್ಥ್ಯ ವೃದ್ಧಿಪಡಿಸುವುದು.
 • ಮೂಲಭೂತ ಸೌಲಭ್ಯ, ಮಾರುಕಟ್ಟೆ, ತಂತ್ರಜ್ಞಾನ ಉನ್ನತೀಕರಣ, ತರಬೇತಿ, ಸಂಶೋಧನೆ ಮತ್ತು ಅಭಿವೃದ್ಧಿ, ಹಣಕಾಸು,ವಿನ್ಯಾಸ ಅಳವಡಿಕೆ, ಕಚ್ಚಾಮಾಲು ಪೂರೈಕೆ, ರಫ್ತು ಇತ್ಯಾದಿ ಕ್ಷೇತ್ರಗಳ ವಿವಿಧ ವಲಯಗಳಿಗೆ ಸಹಾಯ ಮಾಡುವುದು.
 • ವಿವಿಧ ನೀತಿಗಳ ಅನುಷ್ಠಾನ, ಕಾರ್ಯಕ್ರಮ ಮತ್ತು ಯೋಜನೆ ಹಾಗೂ ಸರ್ಕಾರ ಪ್ರಾಯೋಜಿತ ಎಲ್ಲಾ ಘೋಷಣೆಗಳನ್ನು ಪರಿಣಾಮಕಾರಿಯಾಗಿ ಭಾಗವಹಿಸುವುದು ಹಾಗೂ ಈ ಬಗ್ಗೆ ಮೇಲು ಉಸ್ತುವಾರಿ ವಹಿಸುವುದು.
 • ಜಾಗತೀಕರಣದಿಂದ ಉದ್ಭವಿಸುವ ಸವಾಲುಗಳು ಹಾಗೂ ಅವಕಾಶಗಳನ್ನು ಉಪಯೋಗಕ್ಕೂ ಹೊಸ ಯೋಜನೆಗಳ ಆರಂಭ,ಮಾರ್ಪಾಟು ಹಾಗೂ ಪರಿಶೀಲನೆ ಮತ್ತು ಉನ್ನತೀಕರಣ ಕೈಗೊಳ್ಳುವುದು.
 • ಪಾರಂಪರಿಕ ವಿವಿಧ ನೇಯ್ಗೆ ವಿನ್ಯಾಸಗಳನ್ನು ಮುಂದುವರಿಸುವುದು ಹಾಗೂ ಈ ವಿನ್ಯಾಸಗಳ ಅಭಿವೃದ್ಧಿ ಮತ್ತು ಪುನಶ್ಚೇತನ ಕೈಗೊಳ್ಳುವುದು.
 • ನೇಕಾರರ ಕುಶಲತೆ ಮತು ಕಾರ್ಯದಕ್ಷತೆಗಳನ್ನು ಉತ್ತೇಜಿಸಲು ಪ್ರಶಸ್ತಿ ನೀಡಿ ಗೌರವಿಸಲಾಗುವುದು.
 • ಈ ಕ್ಷೇತ್ರದ ಸರ್ವತೋಮುಖ ಅಭಿವೃದ್ಧಿಗೆ ಸರ್ವಕಾಲದಲ್ಲಿಯೂ ಸರ್ವ ಸಹಾಯ ಒದಗಿಸುವುದು.
ಕಾರ್ಯನಿರ್ವಹಣೆಯ ಮಾನದಂಡ
 • ಜವಳಿ ಕ್ಷೇತ್ರಕ್ಕೆ ಸಂಬಂಧಿಸಿದಂತೆ ನೀತಿ, ಕಾರ್ಯಕ್ರಮ ಮತ್ತು ಯೋಜನೆಗಳ ಪ್ರಕಟಣೆ ರೂಪಿಸುವುದು ಹಾಗೂ ಅನುಷ್ಠಾನಗೊಳಿಸುವುದು.
 • ಕಛೇರಿ ಕೆಲಸಗಳಲ್ಲಿ ಪಾರದರ್ಶಕತೆ, ಕಾರ್ಯಕ್ಷಮತೆ ಮತ್ತು ಸೌಜನ್ಯತೆ ಕಾಪಾಡುವುದು.
 • ಉತ್ತಮ ಸೇವೆ ನೀಡಲು ಕಾಲಕಾಲಕ್ಕೂ ಮಾಹಿತಿಗಳ ಸುಧಾರಣೆ.
 • ಕಾಗದ ರಹಿತ ಕಛೇರಿಯನ್ನಾಗಿಸುವ ಉದ್ದೇಶ
 • ಬರವಣಿಗೆ ಮೂಲಕ ಬಂದ ವಿಚಾರಣೆಗಳಿಗೆ 15 ದಿನಗಳಲ್ಲಿ ಸ್ವೀಕೃತಿ ಮತ್ತು ಉತ್ತರವನ್ನು ಒದಗಿಸುವಂತೆ ಕ್ರಮ ವಹಿಸುವುದು.
 • ಕಛೇರಿಗೆ ನೆನಪೋಲೆಗಳು ಬಾರದಂತೆ ಕ್ರಮ ವಹಿಸುವುದು.
 • ತ್ವರಿತವಾಗಿ ನಿರ್ಧಾರಗಳನ್ನು ತೆಗೆದುಕೊಳ್ಳುವುದು ಮತ್ತು ವಿಳಂಬವನ್ನು ತಡೆಗಟ್ಟುವುದು
ದೂರುಗಳು
 • ನಿಮ್ಮ ದೂರುಗಳು ಸ್ವೀಕೃತಿಯಾದ 15 ಕಾರ್ಯನಿರತ ದಿನಗಳಲ್ಲಿ ಅವುಗಳನ್ನು ಇತ್ಯರ್ಥಗೊಳಿಸುವ ಗುರಿ ಹೊಂದಿರುತ್ತೇವೆ.
 • ಇಲ್ಲವಾದಲ್ಲಿ ವಿಳಂಬಕ್ಕೂ ಕಾರಣ ಮತ್ತು ಇತ್ಯರ್ಥಪಡಿಸಲು ಬೇಕಾಗುವ ಕಾಲಾವಕಾಶವನ್ನು ತಿಳಿಸಲಾಗುವುದು.
 • ಹೆಚ್ಚಿನ ಮಾಹಿತಿ, ಸ್ಪಷ್ಠೀಕರಣ ಹಾಗೂ ಸಲಹೆ ಸೂಚನೆಗಳು ಇದ್ದಲ್ಲಿ ದಯಮಾಡಿ ತಾವು ಕೆಳಕಂಡ ನೋಡಲ್ ಅಧಿಕಾರಿಗಳನ್ನು ಸಂಪರ್ಕಿಸಬಹುದು.
ಕೇಂದ್ರ ಕಛೇರಿಯಲ್ಲಿ

ಜವಳಿ ಅಭಿವೃದ್ಧಿ ಆಯುಕ್ತರು ಹಾಗೂ ನಿರ್ದೇಶಕರು,
ಜವಳಿ ಆಯುಕ್ತರ ಪತ್ರಾಂಕಿತ ಸಹಾಯಕರು,
ನಂ.86, ಶುಭೋದಯ ಕಾಂಪ್ಲೆಕ್ಸ್, ರೈಲ್ವೆ ಸಮಾನಾಂತರ ರಸ್ತೆ,
ಕುಮಾರ ಪಾರ್ಕ್ ಪಶ್ಚಿಮ,
ಬೆಂಗಳೂರು-560020
080-23561628
080-23566082

ವಿಭಾಗ/ವಲಯಮಟ್ಟದಲ್ಲಿ

ಜಂಟಿನಿರ್ದೇಶಕರು,
ಕೈಮಗ್ಗಮತ್ತುಜವಳಿಇಲಾಖೆ,
ಬೆಂಗಳೂರು/ತುಮಕೂರು/ಬಳ್ಳಾರಿ/ಬೆಳಗಾವಿ.
ಎಲ್ಲಾ ಜಿಲ್ಲೆಗಳು

ಜಿಲ್ಲಾ ಮಟ್ಟದಲ್ಲಿ

ಉಪ / ಸಹಾಯಕ ನಿರ್ದೇಶಕರು,
ಕೈಮಗ್ಗ ಮತ್ತು ಜವಳಿ ಇಲಾಖೆ,
ಜಿಲ್ಲಾಪಂಚಾಯತ್,
ಎಲ್ಲಾ ಜಿಲ್ಲೆಗಳು