ಏಕೆ ಕರ್ನಾಟಕದಲ್ಲಿ ಹೂಡಿಕೆ ಮಾಡಬೇಕು?


ಕರ್ನಾಟಕ ರಾಜ್ಯದ ಜವಳಿ ಹಾಗೂ ಸಿದ್ಧ ಉಡುಪು ಕ್ಷೇತ್ರದ ಪ್ರಮುಖ ಅಂಶಗಳು

 1. ಬೆಂಗಳೂರನ್ನು ದೇಶದ ಸಿದ್ಧ ಉಡುಪು ತಯಾರಿಕಾ ರಾಜಧಾನಿ ಎಂದು ಕರೆಯಲ್ಪಡುತ್ತದೆ.
 2. ಸಿದ್ಧ ಉಡುಪು ಕ್ಷೇತ್ರವು ಅತಿ ಹೆಚ್ಚು ಉದ್ಯೋಗ ನೀಡುವ ಕ್ಷೇತ್ರವಾಗಿದ್ದು, ಕೃಷಿಯ ನಂತರ ಸ್ಥಾನದಲ್ಲಿರುತ್ತದೆ.
 3. ದೇಶದ ಒಟ್ಟು ಉತ್ಪಾದನೆಯಲ್ಲಿ ಶೇ.20 ರಷ್ಟು ಸಿದ್ಧ ಉಡುಪು ತಯಾರಾಗುತ್ತಿದ್ದು, ರೂ.75000.00 ಕೋಟಿ ಮೌಲ್ಯದ ಸಿದ್ಧ ಉಡುಪು ತಯಾರಿಸಲ್ಪಡುತ್ತದೆ. ಈ ಪೈಕಿ ಅಂತರಾಷ್ಟ್ರೀಯ ಮಟ್ಟದಲ್ಲಿ ಶೇ.11 ರಷ್ಟು ರಪ್ತಾಗಿರುತ್ತಿರುತ್ತದೆ.
 4. ಕರ್ನಾಟಕ ರಾಜ್ಯದ ಸಿದ್ಧ ಉಡುಪು ಕ್ಷೇತ್ರದಲ್ಲಿ ಸುಮಾರು 6.00 ಲಕ್ಷ ಜನರಿಗೆ ಉದ್ಯೋಗ ಒದಗಿಸಲಾಗಿರುತ್ತದೆ.
 5. ಬೆಂಗಳೂರಿನಲ್ಲಿ ಸುಮಾರು 401 ಸಿದ್ಧ ಉಡುಪು ಘಟಕಗಳು ಕಾರ್ಯ ನಿರ್ವಹಿಸುತ್ತಿರುತ್ತವೆ.
 6. ದೇಶದ ಒಟ್ಟು ರೇಷ್ಮೆ ರಪ್ತಿನಲ್ಲಿ ಕರ್ನಾಟಕ ರಾಜ್ಯವು ಶೇ.24 ರಷ್ಟು ರೇಷ್ಮೆ ರಪ್ತಾಗುತ್ತಿರುತ್ತದೆ.
 7. ಭಾರತದ ಒಟ್ಟಾರೆಯಲ್ಲಿ ಕರ್ನಾಟಕವು ಶೇ.65 ರಷ್ಟು ಕಚ್ಚಾ ರೇಷ್ಮೆ ಉತ್ಪಾದನೆ ಮಾಡುತ್ತಿರುತ್ತದೆ.
 8. 55000 ಕೌಶಲ್ಯ ಹೊಂದಿದ ನೇಕಾರ ಕುಟುಂಬಗಳು ಇರುತ್ತವೆ.
 9. 144 ಕೌಶಲ್ಯಾಭಿವೃದ್ಧಿ ತರಬೇತಿ ಕೇಂದ್ರಗಳು ಇಲಾಖೆಯ ಅನುದಾನದಲ್ಲಿ ಸ್ಥಾಪಿತಗೊಂಡಿರುತ್ತವೆ ಹಾಗೂ 168 ಕೌಶಲ್ಯಾಭಿವೃದ್ಧಿ ತರಬೇತಿ ಕೇಂದ್ರಗಳು ಸ್ವಂತ ಬಂಡವಾಳದಿಂದ ಸ್ಥಾಪಿತಗೊಂಡು ಕಾರ್ಯನಿರ್ವಹಿಸುತ್ತಿವೆ.
 10. ಭಾರತದಲ್ಲಿ ಕರ್ನಾಟಕವು ಅತಿ ಹೆಚ್ಚು ಉಣ್ಣೆ ಉತ್ಪಾದನೆ ಮಾಡಿರುತ್ತಿರುತ್ತದೆ. ದೇಶದ ಒಟ್ಟು ಉತ್ಪಾದನೆಯಲ್ಲಿ ಶೇ.12 ರಷ್ಟು ರಾಜ್ಯದಿಂದ ರಫ್ತಾಗುತ್ತಿರುತ್ತದೆ.
 11. ಕರ್ನಾಟಕ ಸರ್ಕಾರವು ನೂತನ ಜವಳಿ ನೀತಿ ಯೋಜನೆಯಡಿಯಲ್ಲಿ ಗ್ರೀನ್ ಫೀಲ್ಡ್ ಟೆಕ್ಸ್‍ಟೈಲ್ ಪಾರ್ಕ್‍ನ ಮೂಲಭೂತ ಸೌಕರ್ಯಗಳ ನಿರ್ಮಾಣಕ್ಕಾಗಿ ಉತ್ತೇಜನ ನೀಡಲಾಗುತ್ತಿದೆ.
 12. ಕರ್ನಾಟಕ ಕೈಗಾರಿಕೆ ಪ್ರದೇಶ ಅಭಿವೃದ್ಧಿ ಮಂಡಳಿ (ಕೆ.ಐ.ಎ.ಡಿ.ಬಿ) ವತಿಯಿಂದ ಭೂ-ಅಭಿವೃದ್ಧಿ ಸೌಕರ್ಯಗಳ ನಿರ್ಮಾಣ ಮಾಡಿ ಉದ್ದಿಮೆದಾರರಿಗೆ ಭೂಮಿ ಹಂಚಿಕೆ ಮಾಡಲಾಗುತ್ತಿದೆ.
 

ನೂತನ ಜವಳಿ ನೀತಿ (2013-18)

 1. ಕೈಮಗ್ಗ ಮತ್ತು ಜವಳಿ ಇಲಾಖೆಯಿಂದ ಪ್ರಥಮವಾಗಿ ಅನುಷ್ಟಾನಗೊಳಿಸಿದ ಸುವರ್ಣ ವಸ್ತ್ರ ನೀತಿ (2008-13) ಯೋಜನೆಯಡಿಯಲ್ಲಿ ರೂ.5710.00 ಕೋಟಿ ಬಂಡವಾಳ ಆಕರ್ಷಣೆ ಮಾಡಿ, 2.67 ಲಕ್ಷ ಜನರಿಗೆ ಉದ್ಯೋಗ ಒದಗಿಸಲಾಗಿರುತ್ತದೆ.
 2. ಹೊಸದಾಗಿ ನೂತನ ಜವಳಿ ನೀತಿ (2013-18) ಜಾರಿಯಾದ ಮೇಲೆ ರೂ.1860.00 ಕೋಟಿ ಬಂಡವಾಳ ಆಕರ್ಷಣೆಯನ್ನು ಮಾಡಲಾಗಿರುತ್ತದೆ.
 3. 2000-13 ರವರೆಗೆ ಅಂದಾಜು ರೂ.9161.00 ಕೋಟಿ ಆಕರ್ಷಣೆ ಮಾಡಲಾಗಿರುತ್ತದೆ.
 4. ರೂ.3326.00 ಕೋಟಿ ಬಂಡವಾಳ ಆಕರ್ಷಣೆಯ ಹಂತದಲ್ಲಿರುತ್ತದೆ.
 5. ರಾಜ್ಯದಲ್ಲಿ ಪ್ರಮುಖ ಜವಳಿ ಪಾರ್ಕ್‍ಗಳಾದ ದೊಡ್ಡ ಬಳ್ಳಾಪುರ (ಡಿ.ಐ.ಟಿ.ಪಿ), ಮುಂಡರ್ಗಿ, ಕರೂರ್, ಹಾಸನ, ಗುಲ್ಬರ್ಗಾ ಮತ್ತು ಪ್ರಸ್ತುತವಾಗಿ ಬೆಳಗಾವಿ, ಚಾಮರಾಜನಗರ, ಚಿಕ್ಕಬಳ್ಳಾಪುರ, ಮೈಸೂರ್ ಮೆಗಾ ಸಿಲ್ಕ್ ಪಾರ್ಕ್ ಮತ್ತು ಬೆಳಗಾವಿಯ ಬೋರೆಗಾಂ ಕೆ.ಎಸ್.ಎಸ್.ಐ.ಡಿ.ಸಿ. ನಲ್ಲಿ ಸ್ಥಾಪಿಸಲಾಗುತ್ತಿದೆ.
 6. ರಾಜ್ಯದಲ್ಲಿ ಪ್ರಮುಖ ಸಿದ್ಧ ಉಡುಪು ಘಟಕಗಳಾದ ಮೆ||ಹಿಮತ್ ಸಿಂಕಾ ಸೀಡೆ ಪ್ರೈ.ಲಿ., ಮೆ||ಶಾಹಿ ಎಕ್ಸ್‍ಪೋಟ್ರ್ಸ್, ಎಟ್ಕೋ ಡೆನಿಮ್ ಬಿಜಾಪುರ, ಪ್ರೀಕಾಟ್ ಮೆರಿಡಿಯನ್ ಹಾಸನ, ದೊಡ್ಡಬಳ್ಳಾಪುರ ಅಪೆರಲ್ ಪಾರ್ಕ್ ಇತ್ಯಾದಿ. ಕಾರ್ಯನಿರ್ವಹಿಸುತ್ತಿವೆ.
 7. ಹೊಸದಾಗಿ ಸ್ಥಾಪನೆಗೊಂಡ ನೂತನ ಜವಳಿ ನೀತಿ (2013-18) ಯೋಜನೆಯ ಮುಖ್ಯ ಉದ್ದೇಶ.
  1. ಸಂತುಲಿತ ಪ್ರಾದೇಶಿಕ ಅಭಿವೃದ್ಧಿಯ ಮೇಲೆ ಪ್ರಾಮುಖ್ಯತೆಯೊಂದಿಗೆ ಫೈಬರ್‍ನಿಂದ ಪೂರ್ಣಗೊಂಡ ಉತ್ಪನ್ನಗಳವರೆಗೆ ಸಂಪೂರ್ಣ ಜವಳಿ ಮೂಲ ಸರಣಿಯಲ್ಲಿ ಉನ್ನತ ಮತ್ತು ಸುಸ್ಥಿರ ಉನ್ನತಿಯನ್ನು ಸಾಧಿಸುವುದು.
  2. ಉತ್ಪಾದನೆ, ತಂತ್ರಜ್ಞಾನ ಮತ್ತು ಸಂಶೋಧನೆ & ಅಭಿವೃದ್ಧಿಯಂಥ ಪ್ರಮುಖ ಪ್ರದೇಶಗಳಲ್ಲಿ ಹೊಮ್ಮುವ ತಾಂತ್ರಿಕ ಜವಳಿಗಳಿಗೆ ಅನುಕೂಲವನ್ನೊದಿಗಿಸುವುದು. ರಾಜ್ಯದಲ್ಲಿ ಜವಳಿ ಘಟಕಗಳ ಸುಸ್ಥಿರತೆಯ ಗುರಿಹೊಂದಿರುವ ವಲಯದಲ್ಲಿ ಸಂಘಟಿತ ಅಭಿವೃದ್ಧಿಯನ್ನು ಈ ನೀತಿಯ ಪ್ರೋತ್ಸಾಹಿಸುವುದು.
  3. ಕುಶಲ ಮಾನವ ಸಂಪನ್ಮೂಲದೊಂದಿಗೆ ಕೈಗಾರಿಕೆಯನ್ನು ಬೆಂಬಲಿಸುವುದು ಮತ್ತು ನೀತಿಯ ಕಾಲಾವಧಿಯಲ್ಲಿ ಕನಿಷ್ಠ 5 ಲಕ್ಷ ಹೊಸ ಉದ್ಯೋಗವಕಾಶಗಳನ್ನು ರಾಜ್ಯದಲ್ಲಿ ಸೃಷ್ಟಿಸುವುದು. ಈ ನೀತಿಯು ನಿರುದ್ಯೋಗಿ ಯುವ ಜನರಿಗಾಗಿ ಕೌಶಲ್ಯಾಭಿವೃದ್ಧಿ ಚಟುವಟಿಕೆಗಳನ್ನು ಮತ್ತು ಜವಳಿ ಕ್ಷೇತ್ರದಲ್ಲಿರುವ ಉದ್ಯೋಗಿಗಳಿಗೆ ಕೌಶಲ್ಯದ ಉನ್ನತೀಕರಣವನ್ನು ಬೆಂಬಲಿಸುವುದು.

ಬೈನರಿ ಜವಳಿ ಪಾರ್ಕ್

 1. ನೂತನ ಜವಳಿ ನೀತಿ ಯೋಜನೆಯ (2013-18) ಅವಧಿಯಲ್ಲಿ ಗ್ರೀನ್ ಫೀಲ್ಡ್ ಟೆಕ್ಸ್‍ಟೈಲ್ ಪಾರ್ಕ್ (ಸಿದ್ಧ ಉಡುಪು) ಪ್ರಥಮವಾಗಿ ರಾಜ್ಯದ ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲ್ಲೂಕಿನಲ್ಲಿ ಸ್ಥಾಪನೆಗೊಂಡಿರುತ್ತದೆ.
 2. ಬೈನರಿ ಅಪೆರಲ್ ಪಾರ್ಕ್ 25 ಎಕರೆ ಜಾಗದಲ್ಲಿ ಸ್ಥಾಪಿತಗೊಂಡಿರುತ್ತದೆ.
 3. ಪಾರ್ಕ್‍ನಲ್ಲಿ 20 ಸಿದ್ಧ ಉಡುಪು ಘಟಕಗಳನ್ನು ಸ್ಥಾಪಿಸಲು ಉದ್ದೇಶಿಸಲಾಗಿದೆ.
 4. ಸುಮಾರು 10000 ಜನರಿಗೆ ಉದ್ಯೋಗವಕಾಶ ಕಲ್ಪಿಸುವ ಗುರಿಯನ್ನು ಹೊಂದಲಾಗಿದೆ.
 5. ಪ್ರಥಮವಾಗಿ ಗ್ಲೋಬಲ್ ಇಂಟರ್ ನ್ಯಾಷನಲ್ ಸಿದ್ಧ ಉಡುಪು ಘಟಕ ಸ್ಥಾಪನೆಗೊಂಡು ಸುಮಾರು 1200 ಜನರಿಗೆ ಉದ್ಯೋಗವಕಾಶ ಒದಗಿಸಲಾಗಿರುತ್ತದೆ.

ಜವಳಿ ನೀತಿಯ ಚೌಕಟ್ಟುಗಳು

 1. ಕರ್ನಾಟಕ ರಾಜ್ಯದಲ್ಲಿ ಜವಳಿ ಮತ್ತು ಸಿದ್ಧ ಉಡುಪು ಕ್ಷೇತ್ರವನ್ನು ಸ್ಪರ್ಧಾತ್ಮಕ ರೀತಿಯಲ್ಲಿ ಅಭಿವೃದ್ಧಿ ಪಡಿಸುವುದು.
 2. ಮಾನವ ಶಕ್ತಿ ಅಭಿವೃದ್ಧಿಪಡಿಸುವುದು.
 3. ಮೂಲ ಭೂತ ಸೌಕರ್ಯಗಳನ್ನು ಅಭಿವೃದ್ಧಿಪಡಿಸುವುದು.
 4. ಸಾಮಥ್ರ್ಯ ರಚನೆ.
 5. ಸಂಸ್ಥೆಯ ಜೋಡಿಸುವಿಕೆಗಳು.
 6. ಹಣಕಾಸಿನ ಪ್ರೋತ್ಸಾಹ ಒದಗಿಸುವುದು.
 7. ವೃತ್ತಿಪರ ಕೈ ಹಿಡುವಡಿಗಳು.
 8. ಪೂರ್ಣ ಜವಳಿ ಮೌಲ್ಯ ಸರಣಿಯ ತಂತ್ರಜ್ಞಾನ ಬಲಪಡಿಸುವುದು.
 9. ಮೆಗಾ ಮತ್ತು ಗ್ರೀನ್ ಫೀಲ್ಡ್ ಟೆಕ್ಸ್‍ಟೈಲ್ ಪಾರ್ಕ್ ಜವಳಿ ಘಟಕಗಳಿಗೆ ಏಕಾ ಗವಾಕ್ಸಿ ಸ್ಪಷ್ಟತೆ ಒದಗಿಸುವುದು.
ಶೀರ್ಷಿಕೆ ವಿವರ
ತಿಳಿಯಲು ಇಲ್ಲಿ ಕ್ಲಿಕ್ ಮಾಡಿ ನೂತನ ಜವಳಿ ನೀತಿ (2013-18)
ತಿಳಿಯಲು ಇಲ್ಲಿ ಕ್ಲಿಕ್ ಮಾಡಿ ಕರ್ನಾಟಕ - ವಿಶ್ವ ಜವಳಿ ಮತ್ತು ಉಡುಪಿನ ಉದ್ಯಮದ ಗಮ್ಯಸ್ಥಾನ