ಕಾರ್ಯಾಚರಣೆಯ ಕೈಪಿಡಿಗೆ ಸಂಬಂಧಿಸಿದಂತೆ | |
---|---|
ಕಾರ್ಯಾಚರಣೆಯ ಕೈಪಿಡಿ | ಡೌನ್‍ಲೋಡ್ |
ವಲಯ | ವ್ಯಾಖ್ಯಾನ |
ವಲಯ 1 | ಸಮಗ್ರ ಕಲ್ಯಾಣ ಕರ್ನಾಟಕ ಪ್ರದೇಶ (ಬೀದರ್, ಕಲ್ಬುರ್ಗಿ, ಯಾದಗಿರಿ, ರಾಯಚೂರು, ಕೊಪ್ಪಳ ಮತ್ತು ಬಳ್ಳಾರಿ). |
ವಲಯ 2 | ಕಲ್ಯಾಣ ಕರ್ನಾಟಕವಲ್ಲದ ಪ್ರದೇಶದಲ್ಲಿರುವ ನಗರ ಪಾಲಿಕೆಗಳು, ಜಿಲ್ಲಾ ಕೇಂದ್ರಗಳನ್ನು ಹೊರತುಪಡಿಸಿದ ಎಲ್ಲಾ ಪ್ರದೇಶಗಳು. |
ವಲಯ 3 | ಕಲ್ಯಾಣ ಕರ್ನಾಟಕವಲ್ಲದ ಪ್ರದೇಶಗಳಲ್ಲಿರುವ ಎಲ್ಲಾ ನಗರ ಪಾಲಿಕೆಗಳು ಮತ್ತು ಜಿಲ್ಲಾ ಕೇಂದ್ರಗಳು. |
ವಲಯ 4 | ಬೆ೦ಗಳೂರು ನಗರ ಜಿಲ್ಲೆ. |
ರಾಜ್ಯದ ನೂತನ ಜವಳಿ ಮತ್ತು ಸಿದ್ಧ ಉಡುಪು ನೀತಿಯು, ರಾಷ್ಟ್ರದಲ್ಲಿರುವ ಜವಳಿ ಮತ್ತು ಉಡುಪು ವಲಯದಲ್ಲಿ ಕರ್ನಾಟಕವನ್ನು ಪ್ರಮುಖ ತಾಣವನ್ನಾಗಿ ಮಾಡುವ ಹಾಗೂ ಜವಳಿ ಮೌಲ್ಯ ಸರಪಳಿಯನ್ನು ಸುವರ್ಣ ಮೌಲ್ಯ ಸರಪಳಿಯನ್ನಾಗಿ ಮಾಡುವ ಗುರಿಯನ್ನು ಹೊಂದಿದೆ. ಈ ನೀತಿಯು ರಾಜ್ಯದಲ್ಲಿರುವ ಜವಳಿ ಕೈಗಾರಿಕೆಗೆ ಉತ್ತೇಜನ ನೀಡುತ್ತದೆ ಹಾಗೂ ಮುಂದಿನ 5 ವರ್ಷಗಳಲ್ಲಿ 5 ಲಕ್ಷ ನೂತನ ಉದ್ಯೋಗಗಳನ್ನು ಸೃಜಿಸುವ ಹಾಗೂ ರೂ.10,000 ಕೋಟ ಮೌಲ್ಯದ ಹೂಡಿಕೆಗಳನ್ನು ಸೆಳೆಯುವ ಗುರಿಗಳನ್ನು ಹೊಂದಿದೆ.
ಧ್ಯೇಯೋದ್ದೇಶಭಾರತದ ಸಿದ್ಧ ಉಡುಪಿನ ರಾಜಧಾನಿ ಎಂಬ ಕರ್ನಾಟಕದ ಸ್ಥಾನವನ್ನು ಉಳಿಸಿಕೊಳ್ಳುವುದು ಮತ್ತು ಬಂಡವಾಳ ಕ್ರೋಢೀಕರಣ, ತ೦ತ್ರಜ್ಞಾನದ ವರ್ಗಾವಣೆ, ವಿಶ್ವ ದರ್ಜೆಯ ಮೂಲಸೌಕರ್ಯ ಮತ್ತು ಕೌಶಲ್ಯ ಉನ್ನತೀಕರಣದ ಮೂಲಕ ಸಮಗ್ರ ಜವಳಿ ಮೌಲ್ಯ ಸರಪಳಿಯಲ್ಲಿ ಉನ್ನತ ಹಾಗೂ ಸುಸ್ಥಿರ ಬೆಳವಣಿಗೆಯನ್ನು ಸಾಧಿಸುವುದು.
ನೀತಿಯ ಗುರಿಗಳುನೂತನ ಜವಳಿ ಮತ್ತು ಸಿದ್ಧ ಉಡುಪು ನೀತಿಯು, ನೀತಿ ಅವಧಿಯಲ್ಲಿ ಅ೦ದರೆ 2019 ರಿ೦ದ 2024ರ ಅವಧಿಯಲ್ಲಿ ರೂ.10,000 ಕೋಟಿ ಮೊತ್ತದ ಮಹತ್ವಾಕಾಂಕ್ಷೆಯ ಹೂಡಿಕೆಯನ್ನು ವಿವರಿಸುತ್ತದೆ ಮತ್ತು ಸರಾಸರಿ 5,00,000 ಜನರಿಗೆ ಉದ್ಯೋ ೀಗ ಸೃಜಿಸುವ ಗುರಿ ಹೊಂದಿದೆ.
ಥ್ರಸ್ಟ್ ಸೆಕ್ಟರ್ (ಒತ್ತು ನೀಡುವ ಕ್ಷೇತ್ರ) :ಸ್ಥಳೀಯ ಆರ್ಥಿಕತೆಯನ್ನು ಉತ್ತೇಜಿಸುವ ಮತ್ತು ರಾಜ್ಯದಲ್ಲಿ ಸಮಗ್ರ ಜವಳಿ ಮತ್ತು ಉಡುಪು ಪರಿಸರ ವ್ಯವಸ್ಥೆಯನ್ನು "ಜಿಸುವ ಉದ್ದೇಶದೊಂದಿಗೆ, ನೂತನ ಜವಳಿ ಮತ್ತು ಸಿದ್ಧ ಉಡುಪು ನೀತಿ 2019-2024ರಲ್ಲಿನ ಮಧ್ಯಸ್ಥಿಕೆ ಕ್ರಮಗಳಿಗಾಗಿ ಈ ಕೆಳಕಂಡ ವಲಯಗಳನ್ನು ಥ್ರಸ್ಟ್ ಸೆಕ್ಟರ್‌ಗಳೆಂದು ಗುರುತಿಸಲಾಗಿದೆ ಹಾಗೂ ಅವು ಈ ಕೆಳಕಂಡಂತಿವೆ:
|. ನೂಲುವಿಕೆ ॥. ನೇಯುವಿಕೆ ॥. ಸ೦ಯೋಜಿತ ಘಟಕಗಳು 1. ಸಂಸ್ಕರಣೆ ೬. ತಾಂತ್ರಿಕ ಜವಳಿಗಳುಎ) ನೂಲು ಉತ್ಪನ್ನಗಳಿಂದ ಫ್ಯಾಷನ್ ಉತ್ಪನ್ನಗಳವರೆಗೆ ಸಮಗ್ರ ಜವಳಿ ಮೌಲ್ಯ ಸರಪಳಿಯಲ್ಲಿ ಬೆಳವಣಿಗೆಯನ್ನು ಚುರುಕುಗೊಳಿಸುವುದು ಮತ್ತು ತಯಾರಿಕೆ ವೆಚ್ಚ ಸ್ಪರ್ಧಾತ್ಮಕತೆಯನ್ನು ಹೆಚ್ಚಿಸುವುದು.
ಬಿ) ರಾಜ್ಯದಲ್ಲಿ ಅಂತರರಾಷ್ಟೀಯ ಸ್ಪರ್ಧಾತ್ಮಕ ಜವಳಿ ಉದ್ಯಮವನ್ನು ಸೃಜಿಸಲು ನೂಲುವಿಕೆ, ನೇಯುವಿಕೆ (ರೇಷಿಯರ್ ಮಗ್ಗ, ಏರ್ಜಿಟ್ ಮಗ್ಗಗಳು "ಮತ್ತು ಎದ್ರು ವ್ಯಾನ ಜಕಾರ್ಡ್) ಸಂಯೋಜಿತ ಘಟಕಗಳು, ಸಂಸ್ಕರಣೆ ಮತ್ತು ತಾಂತ್ರಿಕ ಜವಳಿಗಳನ್ನು ಈ 'ನೀತಿಯ ಬತ್ತು ನೀಡುವ ವಲಯಗಳೆಂಬುದಾಗಿ ಅವುಗಳ ಮೇಲೆ ವಿಶೇಷ ಗಮನವನ್ನು ನೀಡುವುದು.
ಸಿ) ಜವಳಿ ಮೌಲ್ಯ ಸರಪಳಿಯ ಪ್ರತಿಯೊಂದು ವಿಭಾಗದಲ್ಲಿ ಕರ್ನಾಟಕವನ್ನು ಕೌಶಲ್ಯ ಸಮೃದ್ಧವಾದ ರಾಜ್ಯವನ್ನಾಗಿ ಮಾಡುವುದು ಹಾಗೂ ಕೈಗಾರಿಕೆಯ ಅಗತ್ಯತಾನುಸಾರ ಕೌಶಲ್ಯ, ಪುನರ್‌ಕೌಶಲ್ಯ ಮತ್ತು ಕೌಶಲ್ಯಗಳ ಉನ್ನತೀಕರಣಕ್ಕಾಗಿ ಉನ್ನತ ತಂತ್ರಜ್ಞಾನದ ಆಧುನಿಕ ಕೌಶಲ್ಯ ಕೇಂದ್ರಗಳನ್ನು ಅಭಿವೃದ್ಧಿಪಡಿಸುವುದು.
ಡಿ) ವಿಶ್ವದರ್ಜೆಯ ಸೌಲಭ್ಯಗಳ ತಯಾರಿಕೆಗಾಗಿ ಮತ್ತು ಜೆಡ್‌ಎಲ್‌ಡಿ ತಂತ್ರಜ್ಞಾನವನ್ನು ಉತ್ತೇಜಿಸುವುದಕ್ಕಾಗಿ ಬೃಹತ್ ಪ್ರಮಾಣದ ಹೂಡಿಕೆಗಳನ್ನು ಆಕರ್ಷಿಸುವ ಮೂಲಕ ಜವಳಿ ಮೌಲ್ಯ ಸರಪಳಿಯ ಪ್ರತಿಯೊಂದು ಹಂತದಲ್ಲಿ “ಶೂನ್ಯ ಪರಿಣಾಮ; ಶೂನ್ಯ ದೋಷ” ಎಂಬ ಧ್ಯೇಯ ವಾಕ್ಯವನ್ನು ಮನವರಿಕೆ ಮಾಡಿಕೊಳ್ಳುವುದು.
ಇ) ಕೈಮಗ್ಗ ರಫ್ತುಗಳ ಪಾಲುದಾರಿಕೆಯನ್ನು ಹೆಚ್ಚಿಸುವುದು ಮತ್ತು ವಿನ್ಯಾಸ, ಉತ್ಪನ್ನದ ವೈವಿಧ್ಯೀಕರಣ, ಬ್ರಾಂಡ್ ಮಾಡುವಿಕೆ, ಮಾರುಕಟ್ಟೆ ಹಾಗೂ ವಿಶಿಷ್ಟ ಅ೦ತರ್ ರಾಷ್ಟೀಯ ಮಾರುಕಟ್ಟೆಗಳಿಗೆ ಕೈಮಗ್ಗ ಉತ್ಪನ್ನಗಳನ್ನು ಪೂರೈಸುವುದಕ್ಕೆ ಬೆಂಬಲಿಸುವುದು.
ಎಫ್) ಕರ್ನಾಟಕವನ್ನು ತಾಂತ್ರಿಕ ಜವಳಿಗಳ ಪ್ರಮುಖ ತಯಾರಿಕಾ ಹಬ್ ಎ೦ಬ ಮತ್ತು ನಿವ್ವಳ ರಫ್ತುದಾರ ರಾಜ್ಯವೆ೦ಬ ಸ್ಥಾನಕ್ಕೆ ತರುವುದು.
ಜಿ) ಕರ್ನಾಟಕವನ್ನು ಚಿಲ್ಲರೆ ವ್ಯಾಪಾರದ ತಾಣವನ್ನಾಗಿಸಿ, ರಾಜ್ಯದಲ್ಲಿನ ಮಾರಾಟ ಮಳಿಗೆಗಳು ಹಾಗೂ ಅಂತರರಾಷ್ಟೀಯ ಉಡುಪು ಜಿಲ್ಲರೆ ಮಳಿಗೆಗಳ ಬೆಳವಣಿಗೆಗೆ ಉತ್ತೇಜನ ನೀಡುವುದು.
ವ್ಯಾಖ್ಯಾನಉದ್ಯಮ | ಜವಳಿ | ಸಿದ್ಧ ಉಡುಪು |
ಎಂಎಸ್‌ಎಂಇ | ಸೂಕ್ಷ್ಮ, ಸಣ್ಣ, ಮಧ್ಯಮ ಉದ್ಯಮಗಳು: ಸೂಕ್ಷ್ಮ ಸಣ್ಣ.
ಮಧ್ಯಮ 'ಉದ್ಯಮಗಳ ಅಭಿವೃದ್ಧಿ ಅಧಿನಿಯಮ,
2000ರ ಅನುಸಾರ, ತಯಾರಿಕೆ ಉದ್ಯಮಗಳನ್ನು
ಸ್ಥಾವರ ಮತ್ತು ಯಂತ್ರಗಳ ಮೇಲೆ ಮಾಡುವ
ಹೂಡಿಕೆಯ ಆಧಾರದ ಮೇಲೆ ಪರಿಭಾಷಿಸಲಾಗಿದೆ
ಮತ್ತು ಈ ಮುಂದಿನಂತೆ ವರ್ಗೀಕರಿಸಲಾಗಿದೆ: * ಸೂಕ್ಷ್ಮ ಉದ್ಯಮ - ರೂ.25 ಲಕ್ಷ ಗಳವರೆಗೆ ಹೂಡಿಕೆ. * ಸಣ್ಣ ಉದ್ಯಮಗಳು - ರೂ.25 ಲಕ್ಷಗಳಿಗಿಂತ ಹೆಜ್ಜು ಹಾಗೂ ರೂ.5 ಕೋಟಿಗಳವರೆಗೆ ಹೂಡಿಕೆ. * ಮಧ್ಯಮ ಉದ್ಯಮಗಳು- ರೂ.5 ಕೋಟಗಿಂತಲೂ ಹೆಜ್ಜು ಹಾಗೂ ರೂ.10 ಕೋಟಿಗಳವರೆಗೆ ಹೂಡಿಕೆ. |
ಸೂಕ್ಷ್ಮ, ಸಣ್ಣ, ಮಧ್ಯಮ ಉದ್ಯಮಗಳು: ಸೂಕ್ಷ್ಮ ಸಣ್ಣ.
ಮಧ್ಯಮ ಉದ್ಯಮಗಳ ಅಭಿವೃದ್ಧಿ ಅಧಿನಿಯಮ,
2006ರ ಅನುಸಾರ, ತಯಾರಿಕೆ ಉದ್ಯಮಗಳನ್ನು
ಸ್ಥಾವರ ಮತ್ತು ಯಂತ್ರಗಳ ಮೇಲೆ ಮಾಡುವ
ಹೂಡಿಕೆಯ ಆಧಾರದ ಮೇಲೆ ಪರಿಭಾಷಿಸಲಾಗಿದೆ
ಮತ್ತು ಈ ಮುಂದಿನಂತೆ ವರ್ಗೀಕರಿಸಲಾಗಿದೆ: * ಸೂಕ್ಷ್ಮ ಉದ್ಯಮ - ರೂ.25 ಲಕ್ಷಗಳವರೆಗೆ ಹೂಡಿಕೆ. * ಸಣ್ಣ ಉದ್ಯಮಗಳು -ರೂ.25 ಲಕ್ಷಗಳಿಗಿಂತ ಹೆಜ್ಜು ಹಾಗೂ ರೂ.5 ಕೋಟಿಗಳವರೆಗೆ ಹೂಡಿಕೆ. * ಮಧ್ಯಮ ಉದ್ಯಮಗಳು ಎ. ರೂ.5 ಕೋಟಿಗಿಂತಲೂ ಹೆಚ್ಚು ಹಾಗೂ ರೂ.10 ಕೋಟಿಗಳವರೆಗೆ ಹೂಡಿಕೆ. |
ಮಧ್ಯಮ ಮತ್ತು ಬ್ರಹತ್ | ಸೂಕ್ಷ್ಮ ಸಣ್ಣ ಮತ್ತು ಮಧ್ಯಮ ಉದ್ಯಮವೆಂದು ವರ್ಗೀಕರಿಸಿರದ ಹಾಗೂ ರೂ.300 ಕೋಟಿಗಳ ವರೆಗೆ ಹೂಡಿಕೆ ಮಾಡಿರುವಂಥ ಕೈಗಾರಿಕಾ ಘಟಕವನ್ನು ಬೃಹತ್ ಉದ್ಯಮವೆಂದು ವರ್ಗೀಕರಿಸತಕ್ಕದ್ದು. ಉದ್ಯೋಗ: ಮೊದಲ ರೂ.100. ಕೋಟಿಗಳ ಹೂಡಿಕೆಗಾಗಿ ಕನಿಷ್ಟ 200ಜನರಿಗೆ ಉದ್ಯೋಗಾವಕಾಶ ಹಾಗೂ ಪ್ರಮಾಣಾನುಸಾರವಾಗಿ ಪ್ರತಿ ಹೆಚ್ಚುವರಿ ರೂ.100 ಕೋಟಿಗಳ ಹೂಡಿಕೆಗೆ ಹೆಚ್ಚುವರಿ 75 ಜನರಿಗೆ ಉದ್ಯೋಗಾವಕಾಶ. | ಸೂಕ್ಷ್ಮ ಸಣ್ಣ ಮತ್ತು ಮಧ್ಯಮ ಉದ್ಯಮವೆಂದು ವರ್ಗೀಕರಿಸಿರದ ಹಾಗೂ ರೂ.200 ಕೋಟಿಗಳವರೆಗೆ ಹೂಡಿಕೆ ಮಾಡಿರುವಂಥ ಕೈಗಾರಿಕಾ ಘಟಕವನ್ನು ಬೃಹತ್ ಉದ್ಯಮವೆಂದು ವರ್ಗೀಕರಿಸತಕ್ಕದ್ದು. ಉದ್ಯೋಗ: ಮೊದಲ ರೂ.100 ಕೋಟಿ ಹೂಡಿಕೆಗೆ ಕನಿಷ್ಟ 2000 ಜನರಿಗೆ ಉದ್ಯೋಗಾವಕಾಶ ಹಾಗೂ ಪ್ರಮಾಣಾನುಸಾರವಾಗಿ ಪ್ರತಿ ಹೆಚ್ಚುವರಿ ರೂ. 100 ಕೋಟಿಗಳ ಹೂಡಿಕೆಗೆ ಹೆಚ್ಚುವರಿ 1000 ಜನರಿಗೆ ಉದ್ಯೋಗಾವಕಾಶ. |
ಮೆಗಾ | ರೂ.300 ಕೋಟಿಗಳಿಗಿಂತಲೂ ಹೆಚ್ಚಿನ ಮೊತ್ತವನ್ನು ಸ್ಥಿರಾಸ್ತಿಗಳಲ್ಲಿ ಹೂಡಿಕೆ ಮಾಡಿರುವ ಯೋಜನೆಗಳನ್ನು ಮಹಾ ಉದ್ಯಮಗಳೆಂದು ವರ್ಗೀಕರಿಸತಕ್ಕದ್ದು. ಉದ್ಯೋಗ: ಮೊದಲ ರೂ.300. ಕೋಟಿಗಳ ಹೂಡಿಕೆಗೆ ಕನಿಷ್ಟ 350 ಜನರಿಗೆ ಉದ್ಯೋಗಾವಕಾಶ ಹಾಗೂ ಪ್ರಮಾಣಾನು ಸಾರವಾಗಿ ಪ್ರತಿ ಹೆಚ್ಚುವರಿ ರೂ.100 ಕೋಟಿಗಳ ಹೂಡಿಕೆಗೆ ಹೆಚ್ಚುವರಿ 75 ಜನರಿಗೆ ಉದ್ಯೋಗಾವಕಾಶ. | ಸೂಕ್ಷ್ಮ ಸಣ್ಣ ಮತ್ತು ಮಧ್ಯಮ ಉದ್ಯಮವೆಂದು ವರ್ಗೀಕರಿಸಿರದ ಹಾಗೂ ರೂ.200 ಕೋಟಿಗಳವರೆಗೆ ಹೂಡಿಕೆ ಮಾಡಿರುವಂಥ ಕೈಗಾರಿಕಾ ಘಟಕವನ್ನು ಬೃಹತ್ ಉದ್ಯಮವೆಂದು ವರ್ಗೀಕರಿಸತಕ್ಕದ್ದು. ಉದ್ಯೋಗ: ಮೊದಲ ರೂ.100 ಕೋಟಿ ಹೂಡಿಕೆಗೆ ಕನಿಷ್ಟ 2000 ಜನರಿಗೆ ಉದ್ಯೋಗಾವಕಾಶ ಹಾಗೂ ಪ್ರಮಾಣಾನುಸಾರವಾಗಿ ಪ್ರತಿ ಹೆಚ್ಚುವರಿ ರೂ. 100 ಕೋಟಿಗಳ ಹೂಡಿಕೆಗೆ ಹೆಚ್ಚುವರಿ 1000 ಜನರಿಗೆ ಉದ್ಯೋಗಾವಕಾಶ. |
ಆಧಾರ ಉದ್ಯಮ | ಈ ನೀತಿಯು ಅಡಿಸೂಚಿತವಾಗುವವರೆಗೆ, ಯಾವುದೇ ಇನ್ನಿತರ ಜವಳಿ ಘಟಕ ಸ್ಥಾಪಿತವಾಗಿರದ ತಾಲ್ಲೂಕಿನಲ್ಲಿ ಆ ರೀತಿಯ ಜವಳಿ ಘಟಕವು ಮೊದಲನೆಯದ್ದಾಗಿದ್ದರೆ, ಪ್ರಧಾನ ಉದ್ಯಮ /ಕೈಗಾರಿಕೆ ಎಂದು ವರ್ಗೀಕರಿಸಬೇಕಾದ ಘಟಕವು ರೂ.100 ಕೋಟಿಗಳ ಕನಿಷ್ಠ ಹೂಡಿಕೆಯನ್ನು ಹೊಂದಿರತಕ್ಕದ್ದು ಮತ್ತು ಕನಿಷ್ಠಪಕ್ಷ ಘಟಕವು 200 ನೌಕರರನ್ನು ನೇರವಾಗಿ ನೇಮಕ ಮಾಡಿಕೊಳ್ಳತಕ್ಕದ್ದು. | ಈ ನೀತಿಯು ಅದಧಿಸೂಚಿತವಾಗುವವರೆಗೆ, ಯಾವುದೇ ಇನ್ನಿತರ ಸಿದ್ಧ ಉಡುಪು ಘಟಕವು ಸ್ಥಾಪಿತವಾಗಿರದ ತಾಲ್ಲೂಕಿನಲ್ಲಿ ಆ ರೀತಿಯ ಸಿದ್ಧ ಉಡುಪು. ಘಟಕವು. ಮೊದಲನೆಯದಾಗಿದ್ದರೆ. ಪ್ರಧಾನ ಉದ್ಯಮ /ಕೈಗಾರಿಕೆ ಎಂದು ವರ್ಗೀಕರಿಸಬೇಕಾದ ಘಟಕವು ರೂ.50 ಕೋಟಿಗಳ ಕನಿಷ್ಠ ಹೂಡಿಕೆಯನ್ನು ಹೊಂದಿರತಕ್ಕದ್ದು ಮತ್ತು ಕನಿಷ್ಠಪಕ್ಷ ಘಟಕವು 1000 ನೌಕರರನ್ನು ನೇರವಾಗಿ ನೇಮಕ ಮಾಡಿಕೊಳ್ಳತಕ್ಕದ್ದು. |
ವಿಭಾಗ
ಥಸ್ಟ್ ವಲಯ
ಇತರೆ
ವಲಯ1
30%
25%
ವಲಯ2
25%
20%
ವಲಯ3
20%
15%
ವಲಯ4
-
-
ವಿಭಾಗ
ಥಸ್ಟ್ ವಲಯ
ಇತರೆ
ವಲಯ1
25%
20%
ವಲಯ2
20%
15%
ವಲಯ3
15%
10%
ವಲಯ4
-
-
ಹೆಚ್ಚುವರಿ ಸಹಾಯಧನ
ಪ.ಜಾ/ಪ.ಪಂ ವ್ಯಕ್ತಿಗಳು/ ನಸ ಅಲ್ಪಸಂಖ್ಯಾತರು/ ಮಾಜಿ ಸೈನಿಕರು/ಮಹಿಳೆಯರಿಗಾಗಿ ಸ್ಥಿರಾಸ್ತಿಗಳ ಮೌಲ್ಯದ ಮೇಲೆ ಶೇಕಡಾ 5 ರಷ್ಟು ಹೆಚ್ಚುವರಿ ಬಂಡವಾಳ ಸಹಾಯಧನ.
ವಿಭಾಗ
ಸಿದ್ಧ ಉಡುಪು
ವಲಯ1
25%
ವಲಯ2
20%
ವಲಯ3
15%
ವಲಯ4
-
ವಿಭಾಗ
ಸಿದ್ಧ ಉಡುಪು
ವಲಯ1
20%
ವಲಯ2
15%
ವಲಯ3
10%
ವಲಯ4
-
ಹೆಚ್ಚುವರಿ ಸಹಾಯಧನ
ಪ.ಜಾ/ಪ.ಪಂ ವ್ಯಕ್ತಿಗಳು/ ನಸ ಅಲ್ಪಸಂಖ್ಯಾತರು/ ಮಾಜಿ ಸೈನಿಕರು/ಮಹಿಳೆಯರಿಗಾಗಿ ಸ್ಥಿರಾಸ್ತಿಗಳ ಮೌಲ್ಯದ ಮೇಲೆ ಶೇಕಡಾ 5 ರಷ್ಟು ಹೆಚ್ಚುವರಿ ಬಂಡವಾಳ ಸಹಾಯಧನ.
ವಿಭಾಗ
ವಲಯ1
ವಲಯ2
ವಲಯ3
ವಲಯ4
ವಿಭಾಗ
ವಲಯ1
ವಲಯ2
ವಲಯ3
ವಲಯ4
ಥಸ್ಟ್ ವಲಯ
ಇತರೆ
ಮೊದಲ 5 ವರ್ಷಗಳಿಗೆ ಅವಧಿ ಸಾಲಗಳ ಮೇಲೆ ವಾರ್ಷಿಕ ಶೇಕಡಾ 5 ರಷ್ಟು ಬಡ್ಡಿ ದರದಲ್ಲಿ ಬಡ್ಡಿ ಸಹಾಯಧನ
ಸಿದ್ಧ ಉಡುಪು
ಮೊದಲ 5 ವರ್ಷಗಳಿಗೆ ಅವಧಿ ಸಾಲಗಳ ಮೇಲೆ ವಾರ್ಷಿಕ ಶೇಕಡಾ 5 ರಷ್ಟು ಬಡ್ಡಿ ದರದಲ್ಲಿ ಬಡ್ಡಿ ಸಹಾಯಧನ
ವಿಭಾಗ
ಸ್ಟಿನ್ನಿ೦ಗ್
ನೇಯ್ಗೆ
ಏಕೀಕೃತ ಘಟಕ
ಪ್ರೊಸೆಸಿಂಗ್
ತಾಂತ್ರಿಕ ಜವಳಿ
ಇತರೆ
ಅಸಂಪ್ರದಾಯಿಕ ನವೀಕರಿಸ ಬಹುದಾದ ಇಂಧನ ಮೂಲಗಳ ಬಳಕೆ
ವಲಯ 1,2,3
ರೂ.2
ರೂ.2
ರೂ.1/-
ರೂ.2/-
ವಲಯ 4
-
ವಿಭಾಗ
ಸ್ಟಿನ್ನಿ೦ಗ್
ನೇಯ್ಗೆ
ಏಕೀಕೃತ ಘಟಕ
ಪ್ರೊಸೆಸಿಂಗ್
ತಾಂತ್ರಿಕ ಜವಳಿ
ಇತರೆ
ಅಸಂಪ್ರದಾಯಿಕ ನವೀಕರಿಸ ಬಹುದಾದ ಇಂಧನ ಮೂಲಗಳ ಬಳಕೆ
ವಲಯ 1,2,3
ರೂ.2
ರೂ.1
ರೂ.2
ರೂ.1
ರೂ.2
ವಲಯ 4
-
ವಿಭಾಗ
ಸಿದ್ಧ ಉಡುಪು
ವಲಯ 1,2,3
ರೂ.1
ವಲಯ 4
-
ಮುದ್ರಾಂಕ ಶುಲ್ಕ ವಿನಾಯಿತಿ ಮತ್ತು ರಿಯಾಯಿತಿ ನೋಂದಣಿ ಶುಲ್ಕಗಳು
ಮುದ್ರಾಂಕ ಶುಲ್ಕ ವಿನಾಯಿತಿ ಮತ್ತು ಪ್ರತಿ ರೂ.1000ಕ್ಕೆ ರೂ.1/- ರ ದರದಲ್ಲಿ ನೋಂದಣಿ ರಿಯಾಯಿತಿ ಶುಲ್ಕಗಳು.
-
ವಿಭಾಗಗಳು
ಥಸ್ಟ್ ವಲಯ
ಸಿದ್ಧ ಉಡುಪು
ಇತರೆ
ವಲಯ 4 ಅನ್ನು ಹೊರತುಪಡಿಸಿ ಎಲ್ಲಾ ವಲಯಗಳು
ಎಲ್ಲಾ ನೂತನ ಘಟಕಗಳಿಗಾಗಿ 5 ವರ್ಷಗಳ ಅವಧಿಯವರೆಗೆ ಪ್ರತಿ ತಿಂಗಳು ಪ್ರತಿಯೊಬ್ಬ ನೌಕರರ ವೇತನ ದರದಂತೆ ಇಪಿಎಫ್ ಮತ್ತು ಇಎಸ್‌ಐ ಸಹಯಾಧನವಾಗಿ ನಿಯೋಜಿತರ ವಂತಿಗೆಯ ಶೇಕಡಾ 75ರಷ್ಟನ್ನು ಮರುಸ೦ದಾಯ ಮಾಡಲಾಗುತ್ತದೆ
ವಲಯ 4
-
ವಿಭಾಗ
ಸಿದ್ಧ ಉಡುಪು
ವಲಯ 1
ಪ್ರತಿ ಕಾರ್ಮಿಕರಿಗೆ ರೂ.3000/-
ವಲಯ 2
ಪ್ರತಿ ಕಾರ್ಮಿಕರಿಗೆ
ವಲಯ 3
ರೂ.2000/-
ವಲಯ 4
-
ಸ್ವಚ್ಛ ಮತ್ತು ಪರಿಸರ ಸ್ನೇಹಿ ತಂತ್ರಜ್ಞಾನಗಳಿಗೆ ಸಂಬಂಧಿಸಿದಂತೆ ಹಸಿರು ಕ್ರಮಗಳನ್ನು ಉತ್ತೇಜಿಸುವ ಸಲುವಾಗಿ ಮತ್ತು ಜೆಡ್.ಎಲ್.ಡಿ ಕ್ರಮಗಳನ್ನು ಪ್ರೋತ್ಸಾಹಿಸುವುದಕ್ಕಾಗಿ ತ್ಯಾಜ್ಯ ಸ೦ಸ್ಕರಣ ಘಟಕಗಳನ್ನು (ಇಟಪಿ) ಸ್ಥಾಪಿಸುವುದಕ್ಕಾಗಿ ಶೇ.50 ರಷ್ಟು ಬ೦ಡವಾಳ ಸಹಾಯಧನ ಅಥವಾ ರೂ.5 ಕೋಟಿ ಇವುಗಳಲ್ಲಿ ಯಾವುದು ಕಡಿಮೆಯೋ ಅದನ್ನು ಸ೦ಯೋಜಿತ ಮತ್ತು ಸಂಸ್ಕರಣಾ ಘಟಕಗಳಿಗಾಗಿ ರಾಜ್ಯದಾದ್ಯಂತ ನೀಡಲಾಗುವುದು.
(a) ಯೋಜನಾ ವೆಚ್ಚದ 40% ವರೆಗಿನ ಗ್ರೀನ್‌ಫೀಲ್ಡ್ ಪಾರ್ಕ್‌ಗಳಿಗೆ ಸಾಮಾನ್ಯ ಮೂಲಸೌಕರ್ಯಗಳ ಅಭಿವೃದ್ಧಿಗಾಗಿ ವೈಯಕ್ತಿಕ ಕಾನೂನು ಘಟಕ / SPV ಗೆ ಒಂದು ಬಾರಿ ಅನುದಾನವನ್ನು ಒದಗಿಸಲಾಗುತ್ತದೆ ಅಥವಾ ಪ್ರತಿ ಪಾರ್ಕ್ ಯೋಜನೆಗೆ INR 40.00 ಕೋಟಿಗಳು, ಅವರು ಇರುವ ವಲಯಗಳನ್ನು ಲೆಕ್ಕಿಸದೆ ಯಾವುದು ಕಡಿಮೆಯೋ ಅದು.
(b) ಯಾವುದೇ ಕೇಂದ್ರ ಸರ್ಕಾರದ ಯೋಜನೆಯಡಿಯಲ್ಲಿ ಅನುಮೋದಿಸಲ್ಪಟ್ಟ ಮತ್ತು ಅನುದಾನಿತವಾಗಿರುವ ಯೋಜನೆಗಳು ಅಂತಹ ಯೋಜನೆಗಳ ಅಡಿಯಲ್ಲಿ ಹೊಸದಾಗಿ ಅನುಮೋದನೆಯನ್ನು ಪಡೆಯಬಹುದು, ಅಲ್ಲಿ ಯೋಜನಾ ವೆಚ್ಚದ ಹೆಚ್ಚುವರಿ 10% ಮಾತ್ರ ಅಂತಹ ಪಾರ್ಕ್ ಯೋಜನೆಗಳಿಗೆ ಪೂರಕ ರಾಜ್ಯ ಸರ್ಕಾರದ ಪ್ರೋತ್ಸಾಹವನ್ನು ಒದಗಿಸಲಾಗುತ್ತದೆ.
ವೈಯಕ್ತಿಕ / SPV ಯನ್ನು ಬ್ರೌನ್‌ಫೀಲ್ಡ್ ಕ್ಲಸ್ಟರ್‌ಗೆ ಒಂದು ಬಾರಿಯ ಅನುದಾನವನ್ನು ಒದಗಿಸಲಾಗುತ್ತದೆ, ಪ್ರಾಜೆಕ್ಟ್ ವೆಚ್ಚದ 40% ವರೆಗೆ ಅಥವಾ ಪ್ರತಿ ಕೈಗಾರಿಕಾ ಎಸ್ಟೇಟ್ ಯೋಜನೆಗೆ INR 12.00 ಕೋಟಿಗಳು, ಅವರು ಇರುವ ವಲಯಗಳನ್ನು ಲೆಕ್ಕಿಸದೆ ಕಡಿಮೆ.
(1) ಪ್ರತ್ಯೇಕ ಉದ್ಯಮ /ಎಸ್.ಪಿ.ವಿ.ಗೆ ಯೋಜನಾ ವೆಚ್ಚದ ಶೇ.50 ರವರೆಗೆ ಒಂದು ಬಾರಿ ಸಹಾಯಧನದ ನೆರವನ್ನು ನೀಡಲಾಗುವುದು ಮತ್ತು ಕೈಮಗ್ಗ ಯೋಜನೆಗಳ ಸಂದರ್ಭದಲ್ಲಿ ಸಹಾಯಧನವನ್ನು ಯೋಜನಾ ವೆಚ್ಚ ಶೇ.80ಕ್ಕೆ ಸೀಮಿತಗೊಳಿಸಲಾಗುತ್ತದೆ.
(2) ಕೇಂದ್ರ ಸರ್ಕಾರದ ಯಾವುದೇ ಯೋಜನೆಯಡಿ ಹಣಕಾಸು ನೆರವನ್ನು ಪಡೆಯುತ್ತಿರುವ ಯೋಜನೆಗಳ ಸಂದರ್ಭದಲ್ಲಿ ಸಹಾಯಧನವು ಯೋಜನಾ ವೆಚ್ಚದ ಶೇ.20 ರಷ್ಟು ಅಥವಾ ರೂ.5 ಕೋಟಿ ಯಾವುದು ಕಡಿಮೆಯೋ ಆ ಮೊತ್ತಕ್ಕೆ ಮಿತಿಗೊಳಿಸಲಾಗುವುದು.
ಜವಳಿ/ತಾಂತ್ರಿಕ ಜವಳಿಯ ಉತ್ಕೃಷ್ಟತಾ ಕೇಂದ್ರ ಸ್ಥಾಪಿಸಿರುವುದಕ್ಕೆ ರಾಜ್ಯ ಸರ್ಕಾರವು ನೀತಿಯ ಅವಧಿಯಲ್ಲಿ ರೂ.10 ಕೋಟಿವರೆಗೆ ಒಂದು ಬಾರಿ ಅನುದಾನ ನೀಡಲಾಗುವುದು.
ಜವಳಿ ಮೌಲ್ಯದ ಸರಪಳಿಯಲ್ಲಿ ಶೈಕ್ಷಣಿಕ ಮತ್ತು ಕೌಶಲ್ಯಾಭಿವೃದ್ಧಿಯಲ್ಲಿ ತೊಡಗಿ ಕೊಂಡಿರುವ ಪ್ರಖ್ಯಾತ ಸಂಸ್ಥೆಗಳಿಗೆ ಕ್ಯಾಂಪಸ್‌ನಲ್ಲಿ ತರಬೇತಿ ಸೌಲಭ್ಯಗಳನ್ನು ಉನ್ನತೀಕರಣಗೊಳಿಸುವುದಕ್ಕಾಗಿ ಹಣಕಾಸಿನ ನೆರವನ್ನು ಒದಗಿಸಲಾಗುವುದು. ಜವಳಿ ಮೂಲಭೂತ ಸೌಕರ್ಯಗಳ ಉನ್ನತೀಕರಣವನ್ನು ಸಮರ್ಥಿಸುವ ಅನುಮೋದಿತ ಡಿ.ಪಿ.ಆರ್ ಅಧಾರದ ಮೇಲೆ ಸಂಸ್ಥೆಗಳಿಗೆ ರೂ.! ಕೋಟಿಯವರೆಗೆ ಹಣಕಾಸಿನ ನೆರವನ್ನು ನೀಡಲಾಗುವುದು.
ಜವಳಿ ಮತ್ತು ಉಡುಪು ವಲಯದಲ್ಲಿ ಅಗತ್ಯವಾದ ಮೂಲಭೂತ ಸೌಕರ್ಯಗಳು ಮತ್ತು ಫಲಾನುಭವಿಗಳಿಗೆ ತರಬೇತಿ ನೀಡುವ ಸಾಮರ್ಥ್ಯವನ್ನು ಹೊಂದಿದ್ದರೆ ಅವರಿಗೆ ತರಬೇತಿ ವೆಚ್ಚದ ಕಡೆಗೆ ಬೆಂಬಲವನ್ನು ನೀಡಲಾಗುವುದು. ಕೈಮಗ್ಗ ಮತ್ತು ಜವಳಿ ಇಲಾಖೆಯ ಹಣಕಾಸು ನೆರವಿನ ಮುಖಾಂತರ ಮೂಲಭೂತ ಸೌಕರ್ಯಗಳನ್ನು ಸೃಜಿಸಲಾಗಿದ್ದರೆ, ಪ್ರತಿ ಫಲಾನುಭವಿಗೆ 45 ದಿನಗಳಿಗೆ ಕೌಶಲ್ಯ ಅಭಿವೃದ್ಧಿ ಕೇ೦ದ್ರಗಳಿಗಾದರೆ ರೂ.9,500/-ಮತ್ತು ಖಾಸಗಿ ಕೇ೦ದ್ರಗಳಿಗಾದರೆ ರೂ.11000/- ದಂತೆ ತರಬೇತಿ ವೆಚ್ಚದ ಕಡೆಗೆ ನೆರವನ್ನು ನೀಡಲಾಗುವುದು .ತರಬೇತಿ ವೆಚ್ಚದ ವಿಂಗಡಣಾ ವಿವರಗಳು ಕೆಳಕಂಡಂತಿವೆ
* ತರಬೇತಿ ಫಲಾನುಭವಿಯ ಶಿಷ್ಯವೇತನ - ರೂ.3,500/-
* ಕಚ್ಛಾ ವಸ್ತುಗಳ ಕಡೆಗೆ ಬೆ೦ಬಲ - ರೂ.1000/-
* ಸಂಸ್ಥೆಯ ಶುಲ್ಕದ ನೆರವು - ಕೌಶಲ್ಯ ಅಭಿವೃದ್ಧಿ ಕೇಂದ್ರಗಳಿಗಾಗಿ ರೂ.5,000/- ಮತ್ತು ಖಾಸಗಿ ತರಬೇತಿ ಕೇ೦ದ್ರಗಳಿಗಾಗಿ ರೂ.6,500/
ಪ್ರತಿ ಫಲಾನುಭವಿಗೆ ರೂ.11000/- ಸಹಾಯಧನವನ್ನು ನೀಡಲಾಗುವುದು.
ಯೋಜನಾ ವೆಚ್ಚದ ಶೇ.50 ರಷ್ಟು ಅಥವಾ ರೂ.50 ಲಕ್ಷ ಯಾವುದು ಕಡಿಮೆಯೋ ಆ ಮೊತ್ತಕ್ಕೆ ಮಿತಿಗೊಳಿಸಲಾಗುವುದು.
ಯೋಜನಾ ವೆಚ್ಚದ ಶೇ.50 ರಷ್ಟು ಅಥವಾ ರೂ.25 ಲಕ್ಷ ಯಾವುದು ಕಡಿಮೆಯೋ ಆ ಮೊತ್ತಕ್ಕೆ ಮಿತಿಗೊಳಿಸಲಾಗುವುದು.
ಯೋಜನಾ ವೆಚ್ಚದ ಶೇ.50 ರಷ್ಟು ಅಥವಾ ರೂ.5 ಲಕ್ಷ ಯಾವುದು ಕಡಿಮೆಯೋ ಆ ಮೊತ್ತಕ್ಕೆ ಮಿತಿಗೊಳಿಸಲಾಗುವುದು.
ಕೈಮಗ್ಗ ಮತ್ತು ಜವಳಿ ಇಲಾಖೆಯು ಮೆಗಾ ಯೋಜನೆಗಳನ್ನು ಪ್ರೋತ್ಸಾಹಿಸುವುದು ಮತ್ತು ರಾಜ್ಯದಲ್ಲಿ ಉದ್ಯೋಗ ಸೃಜನೆ ಚಟುವಟಿಕೆಗಳು ಮತ್ತು ಅಂತರ್ಗತ ವಲಯ ಅಭಿವೃದ್ಧಿಗೆ ಬಹುಪಯೋಗಿ ಪರಿಣಾಮಕಾರಿಯಾಗಿರುವ ಮತ್ತು ಸಮಗ್ರವಾಗಿರುವ ಜವಳಿ ಮತ್ತು ಸಿದ್ಧ ಉಡುಪುಗಳಲ್ಲಿ ಮೆಗಾ ಯೋಜನಾ ಘಟಕಗಳನ್ನು ಉತ್ತೇಜಿಸಲು ಮತ್ತು ಸೌಲಭ್ಯ ಕಲ್ಪಿಸಲು ಉದ್ದೇಶಿಸಿದೆ. ಬೃಹತ್ ಉದ್ಯಮಗಳಿಗಾಗಿ ಸೂಚಿಸಲಾದ ಪ್ರೋತ್ಸಾಹಕಗಳು/ ರಿಯಾಯಿತಿಗಳನ್ನು ಮೀರಿ ಮೆಗಾ ಉದ್ಯಮಗಳೆಂದು ಅರ್ಹತೆ ಪಡೆಯುವುದಕ್ಕೆ ಈ ಕೆಳಕ೦ಡ ಅ೦ಶಗಳ ಪ್ರಕಾರ ಪ್ರಕರಣವಾರು ಪ್ರೋತ್ಸಾಹಕಗಳು ರಿಯಾಯಿತಿಗಳ ಪ್ಯಾಕೇಜ್ ಅನ್ನು ಪರಿಗಣಿಸಲಾಗುವುದು.
ರೂ.300. ಕೋಟಿಗಳಿಗಿಂತ ಹೆಚ್ಚಿನ ಸ್ಥಿರಾಸ್ತಿಗಳಲ್ಲಿ ಹೂಡಿಕೆ ಮತ್ತು ಮೊದಲ ರೂ.300 ಕೋಟಿಗಳ ಹೂಡಿಕೆಗೆ ಕನಿಷ್ಟ 350 ಜನರಿಗೆ ಉದ್ಯೋಗಾವಕಾಶ ಮತ್ತು ಪ್ರಮಾಣಾನುಸಾರವಾಗಿ ಪ್ರತಿ ಹೆಚ್ಚುವರಿ ರೂ.100 ಕೋಟಿ ಹೂಡಿಕೆಗೆ ಹೆಚ್ಚುವರಿ 75 ಜನರಿಗೆ ಉದ್ಯೋಗಾವಕಾಶ.
ರೂ.300. ಕೋಟಿಗಳಿಗಿಂತ ಹೆಚ್ಚಿನ ಸ್ಥಿರಾಸ್ತಿಗಳಲ್ಲಿ ಹೂಡಿಕೆ ಮತ್ತು ಮೊದಲ ರೂ.300 ಕೋಟಿಗಳ ಹೂಡಿಕೆಗೆ ಕನಿಷ್ಟ 350 ಜನರಿಗೆ ಉದ್ಯೋಗಾವಕಾಶ ಮತ್ತು ಪ್ರಮಾಣಾನುಸಾರವಾಗಿ ಪ್ರತಿ ಹೆಚ್ಚುವರಿ ರೂ.100 ಕೋಟಿ ಹೂಡಿಕೆಗೆ ಹೆಚ್ಚುವರಿ 75 ಜನರಿಗೆ ಉದ್ಯೋಗಾವಕಾಶ.
ಈ ನೀತಿಯು ಅಧಿಸೂಚಿತವಾಗುವ ವರೆಗೆ, ಯಾವುದೇ ಇನ್ನಿತರ ಜವಳಿ ಘಟಕ ಸ್ಥಾಪಿತವಾಗಿರದ ತಾಲ್ಲೂಕಿನಲ್ಲಿ ಆ. ರೀತಿಯ ಜವಳಿ ಘಟಕವು ಮೊದಲನೆಯದ್ದಾಗಿದ್ದರೆ, ಪ್ರಧಾನ ಉದ್ಯಮ 1 ಕೈಗಾರಿಕೆ ಎಂದು ವರ್ಗೀಕರಿಸಬೇಕಾದ ಘಟಕವು ರೂ.100. ಕೋಟಿಗಳ ಕನಿಷ್ಠ ಹೂಡಿಕೆಯನ್ನು ಹೊಂದಿರತಕ್ಕದ್ದು ಮತ್ತು ಕನಿಷ್ಠಪಕ್ಷ ಘಟಕವು. 200 ನೌಕರರನ್ನು ನೇರವಾಗಿ ನೇಮಕ ಮಾಡಿಕೊಳ್ಳತಕ್ಕದ್ದು.
ಈ ನೀತಿಯು ಅಧಿಸೂಚಿತವಾಗುವ ವರೆಗೆ, ಯಾವುದೇ ಇನ್ನಿತರ ಸಿದ್ಧ ಉಡುಪು ಘಟಕವು ಸ್ಥಾಪಿತವಾಗಿರದ ತಾಲ್ಲೂಕಿನಲ್ಲಿ ಆ ರೀತಿಯ ಸಿದ್ಧ ಉಡುಪು. ಘಟಕವು. ಮೊದಲನೆಯ ದಾಗಿದ್ದರೆ, ಪ್ರಧಾನ ಉದ್ಯಮ/ ಕೈಗಾರಿಕೆ ಎಂದು ವರ್ಗೀಕರಿಸಬೇಕಾದ ಘಟಕವು ರೂ.50 ಕೋಟಿಗಳ ಕನಿಷ್ಠ ಹೂಡಿಕೆಯನ್ನು ಹೊಂದಿರತಕ್ಕದ್ದು ಮತ್ತು ಘಟಕವು ಕನಿಷ್ಠಪಕ್ಷ 1000 ನೌಕರರನ್ನು ನೇರವಾಗಿ ನೇಮಕ ಮಾಡಿಕೊಳ್ಳತಕ್ಕದ್ದು.
ಕಲ್ಯಾಣ ಕರ್ನಾಟಕ ಮತ್ತು ಕಲ್ಯಾಣ ಕರ್ನಾಟಕೇತರ ಪ್ರದೇಶದಲ್ಲಿನ ದೊಡ್ಡ ಮತ್ತು MSME ಘಟಕಗಳಿಗೆ ನೀತಿಯ ಅಡಿಯಲ್ಲಿ ನಿಬಂಧನೆಗಳ ಪ್ರಕಾರ ಒಟ್ಟು ಪ್ರೋತ್ಸಾಹಕಗಳು ಸ್ಥಿರ ಬಂಡವಾಳ ಹೂಡಿಕೆಯ (FCI) 100% CAP ಅನ್ನು ಮೀರಬಾರದು.
ಥ್ರ್ಟ್ ವಲಯದ ಘಟಕಗಳಿಗಾಗಿ ಸ್ಥಿರ ಬಂಡವಾಳ ಹೂಡಿಕೆಯ ಶೇ.5 ರಷ್ಟು ಹೆಚ್ಚುವರಿ ಪ್ರೋತ್ಸಾಹಧನ
ರಾಜ್ಯಾದ್ಯಂತ ಸ್ಥಾಪಿಸಲಾದ ಪ್ರಧಾನ (ಅ್ಯಂಕರ್) ಘಟಕಗಳಿಗಾಗಿ ಸ್ಥಿರ ಬಂಡವಾಳ ಹೂಡಿಕೆಯ ಶೇ.5 ರಷ್ಟು ಹೆಚ್ಚುವರಿ ಪ್ರೋತ್ಸಾಹಧನ
ಎಸ್.ಸಿ/ಎಸ್.ಟಿ ಉದ್ಯಮಿಗಳು/ ವಿಕಲಜೇತನ ವ್ಯಕ್ತಿಗಳು, ಅಲ್ಬಸಂಖ್ಯಾತರು/ ನಿವೃತ್ತ ಪುರುಷ/ಮಹಿಳೆಯರಿಗೆ ಪ್ರಮಾಣಬದ್ಧ ಪ್ಯಾಕೇಜ್ ಅನ್ನು ಮೀರಿ ಶೇ.5 ರಷ್ಟು ಹೆಚ್ಚುವರಿ ಪ್ರೋತ್ಸಾಹಧನ.
ಮಂಜೂರಾದ ಪ್ರೋತ್ಸಾಹಧನವನ್ನು ಪಡೆಯಲು ವಿವರವಾದ ಮಾರ್ಗಸೂಚಿಗಳನ್ನು ಕಾರ್ಯ ನಿರ್ವಹಣಾ ಕೈಪಿಡಿಯಲ್ಲಿ ಉಲ್ಲೇಖಿಸಲಾಗುವುದು ಮತ್ತು ಪ್ರೋತ್ಸಾಹ ಧನಗಳನ್ನು 5 ವರ್ಷಗಳ ಅವಧಿಗೆ ಹಂಚಿಕೆ ಮಾಡಲಾಗುವುದು.
ಶೀರ್ಷಿಕೆ | ವಿವರ |
ತಿಳಿಯಲು ಇಲ್ಲಿ ಕ್ಲಿಕ್ ಮಾಡಿ | ಜವಳಿ ನೀತಿ (2013-18) / ನೂತನ ಜವಳಿ ನೀತಿ 2019-24 |
ತಿಳಿಯಲು ಇಲ್ಲಿ ಕ್ಲಿಕ್ ಮಾಡಿ | ಕರ್ನಾಟಕ - ವಿಶ್ವ ಜವಳಿ ಮತ್ತು ಉಡುಪಿನ ಉದ್ಯಮದ ಗಮ್ಯಸ್ಥಾನ |