ಸನಾತನ ಭಾರತದ ಪ್ರಾಚೀನ ದೇವಸ್ಥಾನಗಳ ಕೆತ್ತನೆಗಳು ವಿವಿಧ ರೀತಿಯ ಉಪಡುಗಳ ವಿನ್ಯಾಸ ಮತ್ತು ನೇಕಾರರಿಕೆ ಕಲೆಯನ್ನು ಬಿಂಬಿಸುತ್ತದೆ. ಭಾರತದ ಪ್ರತಿಯೊಂದು ಭೌಗಳಿಕ ವಿಭಾಗಗಳು ತನ್ನದೇಆದ ವಸ್ತ್ರ ವಿನ್ಯಾಸಗಳ ಸಂಸ್ಕøತಿಯನ್ನು ಹಾಗೂ ವಿವಿಧ ರೀತಿಯ ವಿನೂತನ ಕಚ್ಚ ಮಾಲುಗಳನ್ನು ಬಳಸಿ ಉತ್ಪಾದಿಸಿದ ವಸ್ತುಗಳನ್ನು ಹೊಂದಿರುತ್ತದೆ.
ಭಾರತದಲ್ಲಿ ಕೈಮಗ್ಗ ವಸ್ತ್ರದ್ಯೊಮ ಒಂದು ಪ್ರಾಚೀನ ಕಾಲದ ಸಂಪ್ರಾದಾಯಿಕ ತಾಂತ್ರಿಕತೆ ಹಾಗು ವಿನ್ಯಾಸಗಳನ್ನು ಬಳಸುತ್ತಿತ್ತು. ಭಾರತವು ವಿವಿಧ ರೀತಿಯ ಸೀರೆ ಹಾಗೂ ಇನ್ನಿತರ ಉಡುಪುಗಳನ್ನು ಮಹಿಳಾ ಪ್ರಧಾನವಾಗಿ ತಯಾರಿಸುತ್ತಿದ್ದು, ಭಾರತದ ಮಹಿಳೆ ತನ್ನ ಸೀರೆಯಲ್ಲಿ ಗುರುತಿಸುವಂತೆ ಇನಾವುದೇ ಉಡುಪಿನಲ್ಲಿ ಗುರುತಿಸಿಕೊಳ್ಳಲು ಸಾಧ್ಯವಿಲ್ಲ.
ಕನಾರ್ಟಕ ರಾಜ್ಯವು ಕೈಮಗ್ಗ ಸಮೂಹಗಳಿಗೆ ಹೆಸರುವಾಸಿಯಾಗಿದ್ದು ವಿವಿಧ ರೀತಿಯ ವಿನ್ಯಾಸ ಹಾಗೂ ತಾಂತ್ರಿಕ ಪೂರ್ಣ ನೇಕಾರಿಕೆಯನ್ನು ಹೊಂದಿರುತ್ತದೆ. ಕರ್ನಾಟಕದಲ್ಲಿ ಸಂಪ್ರದಾಯಿಕ ಸೀರೆಗಳನ್ನು ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ಹಾಗೂ ಬಾಗಲಕೋಟೆ ಜಿಲ್ಲೆಯಲ್ಲಿ ಇಳಕಲ್ ಸೀರೆಗಳನ್ನು ತಯಾರಿಸಲಾಗುತ್ತಿದೆ. ಸರಿಸುಮಾರು 8ನೇ ಶತಮಾನದಲ್ಲಿ ಈ ನೇಕಾರಿಕೆಯು ಈ ಭಾಗದಲ್ಲಿ ಬೆಳವಣಿಗೆಯನ್ನ ಹೊಂದಿದ ಅಂಶ ಗಮಗಕ್ಕೆ ಬಂದಿರುತ್ತದ. ಗುಳೇದಗುಡ್ಡೆಯಲ್ಲಿ ತಯಾರಿಸಲಾಗುತ್ತಿರುವ ಸಾಂಪ್ರಾದಾಯಿಕ ಖಣಗಳು ಆ ಭಾಗದಲ್ಲಿ ತಯಾರಾಗುವ ಇಳಕಲ್ ಸೀರೆಯ ಅವಿಭಾಜ್ಯ ಅಂಗವಾಗಿದೆ. ಈ ಉತ್ಪಾದನೆಯನ್ನು ಉತ್ತರ ಕರ್ನಾಟಕ ಅಲ್ಲದೇ ಮಹಾರಾಷ್ಟ್ರದ ವಿಧರ್ಭ ಹಾಗೂ ಮರಾಠವಾಡ ಪ್ರದೇಶದಲ್ಲಿಯೂ ಬಳಸುತ್ತಾರೆ.
ಕರ್ನಾಟಕವು ಸರಿಸುಮಾರು 40,000 ಕೈಮಗ್ಗಗಳು ಹೊಂದಿದ್ದು, ರೇಷ್ಮೆ, ಹತ್ತಿ ಹಾಗೂ ಉಣ್ಣೆ ಬಟ್ಟೆಗಳನ್ನು ನೇಂiÀiಲಾಗುತ್ತಿದೆ. ಈ ಕ್ಷೇತ್ರವು ಅತ್ಯಧಿಕ ಸಂಖ್ಯೆಯಲ್ಲಿ ಗ್ರಾಮಾಂತರ ಮಹಿಳೆಯರಿಗೆ ಉದ್ಯೋಗವನ್ನು ನೀಡಿದದು, ತಮ್ಮ ಕಲೆ ಮತ್ತು ವಿನ್ಯಾಸಗಳನ್ನು ಸೃಷ್ಟಿಸಿ ಜೀವನೋಪಾಯಕ್ಕೆ ಆಸರೆಯಾಗಿದೆ. ಆದರೆ, ಈ ಕೈಮಗ್ಗ ಕ್ಷೇತ್ರವು ಸಹ ಕೆಲವು ಕಷ್ಟಗಳನ್ನು ಎದುರಿಸುತ್ತಿದ್ದು, ಮುಖ್ಯವಾಗಿ ಉತ್ಪಾದಿತ ವಸ್ತುಗಳ ಮಾರುಕಟ್ಟೆ ಒಂದು ಸಂಕಷ್ಟವಾಗಿದೆ. ಈ ಪ್ರಾಚೀನ ಉದ್ದಿಮೆಯನ್ನು ಉಳಿಸಿ ಬೆಳೆಸುವ ಅಗತ್ಯವಿರುತ್ತದೆ. ಈ ನಿಟ್ಟಿನಲ್ಲಿ ಕರ್ನಾಟಕ ಕೈಮಗ್ಗ ಅಭಿವೃದ್ದಿ ನಿಗಮ ಸ್ಥಾಪಿಸಿ ಕೈಮಗ್ಗಗಳ ಅಭಿವೃದ್ದಿಗೆ ಒತ್ತು ನೀಡಲಾಗಿದೆ.
ಜವಳಿ ಅಭಿವೃದ್ಧಿ ಇಲಾಖೆಯು ಕೈಮಗ್ಗ ಯೋಜನೆಗಳ ಮಾರ್ಗಸೂಚಿಗಳನ್ನು ಜಾರಿಗೆ ತಂದಿದೆ & ಕೈಮಗ್ಗ ಮತ್ತು ನಿರ್ದೇಶಕಗಳ ನಿರ್ದೇಶಕವನ್ನು ಕೆಳಗೆ ನೀಡಲಾಗಿದೆ :
1) ರಾಷ್ಟ್ರೀಯ ಕೈಮಗ್ಗ ಅಭಿವೃದ್ದಿ ಕಾರ್ಯಕ್ರಮ (ಎನ್‍ಹೆಚ್‍ಡಿಪಿ)
ಈ ಯೋಜನೆಯ ಬ್ಲಾಕ್ ಲೆವೆಲ್ ಕೈಮಗ್ಗ ಕ್ಲಸ್ಟರ್ನಡಿ 500 ರಿಂದ 2000 ಕೈಮಗ್ಗಗಳ ಸಾಂದ್ರತೆ ಇರುವ ಕ್ಲಸ್ಟರ್ಗಳನ್ನು ಗುರುತಿಸಿ, ತರಬೇತಿ, ಮಗ್ಗ ಮತ್ತು ಸಲಕರಣೆಗಳ ವಿತರಣೆ, ಸಾಮಾನ್ಯ ಸೌಲಭ್ಯ ಕೇಂದ್ರ ಮುಂತಾದ ಸೌಕರ್ಯಗಳನ್ನು ಒದಗಿಸಲಾಗುವುದು.
2) ಮಹಾತ್ಮ ಗಾಂಧಿ ಬುನ್ಕರ್ ಬೀಮಾ ಯೋಜನೆ
18 ರಿಂದ 59 ವರ್ಷಗಳ ನೇಕಾರರಿಗೆ ವೀಮಾ ಭದ್ರತೆಯನ್ನು ಒದಗಿಸಲಾಗುವುದು. ಫಲಾನುಭವಿ ನೇಕಾರರು ರೂ.40/-ಗಳ ವಿಮಾ ಪ್ರೀಮಿಯಂ ಭರಿಸಿದ್ದಲ್ಲಿ ರಾಜ್ಯ ಸರ್ಕಾರ ರೂ.40/-, ಕೇಂದ್ರ ಸರ್ಕಾರ ರೂ150/- ಹಾಗೂ ಭಾರತೀಯ ಜೀವಾ ವಿಮಾ ನಿಗಮವು ರೂ.100/-ಗಳ ವಿಮಾ ಪ್ರೀಮಿಯಂ ಭರಿಸುವುದು. ಸದಸ್ಯ ನೇಕಾರರ ಸ್ವಾಭವಿಕವಾಗಿ
ಮೃತವಾದಲ್ಲಿ ರೂ.60,000/-, ಅಪಘಾತದಿಂದ ಮೃತರಾದಲ್ಲಿ ಅಥವಾ ಖಾಯಂ ಅಂಗವಿಕಲತೆ ಹೊಂದಿದಲ್ಲಿ ರೂ.1,50,000/- ಹಾಗೂ ಭಾಗಶಃ ಅಂಗವಿಕಲತೆ ಹೊಂದಿದಲ್ಲಿ ರೂ.75,000/- ಗಳ ವಿಮಾ ಪರಿಹಾರ ನೀಡಲಾಗುವುದು.
9, 10, 11, 12 ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ವಾರ್ಷಿಕ ರೂ.1,200/-ಗಳ ವಿದ್ಯಾರ್ಥಿ ವೇತನ ನೀಡಲಾಗುವುದು.
3) ಆರೋಗ್ಯ ವಿಮಾ ಯೋಜನೆ
ರಾಷ್ಟ್ರೀಯ ಸ್ವಾಸ್ಥ್ಯ ಬೀಮಾ ಯೋಜನೆಯ ಮಾದರಿಯಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸಹಯೋಗದಲ್ಲಿ ಕೈಮಗ್ಗ ನೇಕಾರರಿಗೆ ಆರೋಗ್ಯ ಸೇವೆಗಳನ್ನು ಒದಗಿಸಲಾಗುವುದು.
4 ) ಕೈಮಗ್ಗ ನೇಕಾರರಿಗೆ ತರಬೇತಿ (ಸ್ಟೈಫಂಡ್)
ವೆಂಕಟಗಿರಿಕೋಟೆ, ಸೇಲಂ ಹಾಗೂ ಕಣ್ಣೂರು ಭಾರತೀಯ ಕೈಮಗ್ಗ ತಂತ್ರಜ್ಞಾನ ಸಂಸ್ಥೆಯಲ್ಲಿ ಡಿಪ್ಲೋಮೊ ವಿದ್ಯಾಭ್ಯಾಸ ಮಾಡುತ್ತಿರುವ ಕರ್ನಾಟಕದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ಪಾವತಿಸಲಾಗುವುದು.
5) ಮೃತ ನೇಕಾರರ (ಕೈಮಗ್ಗ) ಅಂತ್ಯ ಸಂಸ್ಕಾರದ ವೆಚ್ಚ ಮರುಪಾವತಿ
ಸಹಕಾರಿ ಸಂಘದ ನೇಕಾರ ಸದಸ್ಯರು ಮರಣ ಹೊಂದಿದಲ್ಲಿ ಅಂತಹ ಕುಟುಂಬದ ಸದಸ್ಯರಿಗೆ ರೂ.5,000/- ಗಳನ್ನು ಅಂತ್ಯ ಸಂಸ್ಕಾರದ ವೆಚ್ಚಕ್ಕಾಗಿ ನೀಡಲಾಗುವುದು. ಈ ಹಣವನ್ನು ಮೊದಲು ಸದಸ್ಯತ್ವ ಹೊಂದಿದ ಸಹಕಾರಿ ಸಂಘದವರು ಮರಣಹೊಂದಿದ ನೇಕಾರರ ಕುಟುಂಬದವರಿಗೆ ಬಿಡುಗಡೆ ಮಾಡಿ ನಂತರ ಹಣವನ್ನು ಸರ್ಕಾರದಿಂದ ಮರುಸಂದಾಯ ಪಡೆಯಬಹುದಾಗಿದೆ.
6 ) ನಬಾರ್ಡ್ ಪುನರ್ಧನ ಯೋಜನೆಯಡಿ ಬಡ್ಡಿ ಸಹಾಯಧನ
ನೇಕಾರ ಸಹಕಾರ ಸಂಘಗಳು ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ಗಳ ಮೂಲಕ ನಬಾರ್ಡ್ ಪುನರ್ಧನ ಯೋಜನೆಯಡಿ ದುಡಿಮೆ ಬಂಡವಾಳಕ್ಕಾಗಿ ಪಡೆಯುವ ಸಾಲದ ಮೇಲೆ ಶೇ.3 ರ ಬಡ್ಡಿ ಸಹಾಯಧನವನ್ನು ಇಲಾಖಾವತಿಯಿಂದ ನೀಡಲಾಗುತ್ತಿದೆ.
7) ಹೊಸ ವಿನ್ಯಾಸ ಮತ್ತು ಪ್ರವೃತ್ತಿ (ಪ್ರವಾಸ)
ಮಾರುಕಟ್ಟೆ ಬದಲಾವಣೆಗಳಿಗನುಸಾರವಾಗಿ ಹೊಸ ಮಾದರಿಯ ವಿನ್ಯಾಸಗಳ ಬಗ್ಗೆ ಅರಿವನ್ನು ಮೂಡಿಸಲು ನೇಕಾರರ ಸಹಕಾರ ಸಂಘಗಳ ನೇಕಾರರಿಗೆ ರಾಜ್ಯ ಮತ್ತು ಹೊರರಾಜ್ಯಗಳಲ್ಲಿ ಪ್ರವಾಸ ಏರ್ಪಡಿಸಲಾಗುವುದು ಹಾಗೂ ರಾಷ್ಟ್ರೀಯ ವಿನ್ಯಾಸ ಸಂಸ್ಥೆಯ ಸಹಯೋಗದೊಂದಿಗೆ “ವಸ್ತ್ರ ವಿನ್ಯಾಸ ಕೇಂದ್ರ” ಸ್ಥಾಪಿಸಲಾಗುವುದು.
8) ಮಿತವ್ಯಯ ನಿಧಿ ಯೋಜನೆ
ಈ ಯೋಜನೆಯಡಿ ನೇಕಾರರಿಗೆ ಉಳಿತಾಯ ಪ್ರವೃತ್ತಿ ಬೆಳೆಸಿಕೊಳ್ಳಲು ಅನುಕೂಲವಾಗುವಂತೆ ಮಜೂರಿಯಿಂದ ಶೇಕಡ 8 ನ್ನು ಕಟಾಯಿಸಿ ರಾಜ್ಯ ಸರ್ಕಾರದ ಶೇಕಡ 8 ರ ಸಮಚಂದಾ ಸೇರಿಸಿ ಖಜಾನೆಯಲ್ಲಿ ಜಮಾ ಮಾಡಲಾಗುವುದು ಜಮೆಯಾದ ಮೊತ್ತ ಶೇಕಡ 12 ರ ಬಡ್ಡಿಯನು ನೀಡಲಾಗುವುದು. ಈ ಯೋಜನೆಯ ಮೊಬಲಗಿನಡಿ ಫಲಾನುಭವಿಗಳ ಮದುವೆ, ಮನೆ
ನಿರ್ಮಾಣ, ವೈದ್ಯಕೀಯ ವೆಚ್ಚ ಮತ್ತು ಮಕ್ಕಳ ವಿದ್ಯಾಭ್ಯಾಸಕ್ಕೆ ಮುಂಗಡವನ್ನು ಪಡೆಯಬಹುದಾಗಿದೆ.
9) ಸಹಕಾರ ಬ್ಯಾಂಕ್ಗಳು ನೀಡಿದ 1 % ಮತ್ತು 3% ಸಾಲದ ಮೇಲೆ ಬಡ್ಡಿ ಸಹಾಯಧನ
ನೇಕಾರರ ಸಹಕಾರ ಸಂಘಗಳು/ ಕೃಷಿಯೇತರ ಪತ್ತಿನ ಸಹಕಾರ ಸಂಘಗಳು/ ಪಟ್ಟಣ ಸಹಕಾರ ಬ್ಯಾಂಕ್ಗಳಿಂದ ರೂ.2.00 ಲಕ್ಷಗಳ ವರೆಗೆ ಶೇಕಡ 1 ರ ಬಡ್ಡಿ ದರದಲ್ಲಿ ಸಾಲ ಹಾಗೂ ರೂ.2.00 ಲಕ್ಷಗಳಿಂದ ರೂ.5.00 ಲಕ್ಷಗಳ ವರೆಗೆ ಶೇಕಡ 3 ರ ಬಡ್ಡಿ ದರದಲ್ಲಿ ನೀಡಿದ ಸಾಲಕ್ಕೆ ರಾಜ್ಯ ಸರ್ಕಾರವು ಬಡ್ಡಿ ಸಹಾಯಧನ ನೀಡಲಾಗುವುದು.
10) ಮಿತವ್ಯಯ ನಿಧಿ ಯೋಜನೆಯ ಬಡ್ಡಿ
ಮಿತವ್ಯಯ ಯೋಜನೆಯಡಿ ನೇಕಾರರ ಖಾತೆಯಲ್ಲಿರುವ ಮೊಬಲಿಗೆ ಶೇಕಡ 12 ರ ಬಡ್ಡಿಯನ್ನು ಸರ್ಕಾರದಿಂದ ಪಾವತಿಸಲಾಗುವುದು.
11 ) ಕೈಮಗ್ಗ ಉತ್ಪನ್ನಗಳ ಮಾರಾಟ ಮೇಲೆ ಶೇ.20 ರಿಬೇಟ್ ಯೋಜನೆ
ರಾಜ್ಯ ಸರ್ಕಾರವು ವಾರ್ಷಿಕವಾಗಿ ರಾಜ್ಯದ ಪ್ರಮುಖ ಹಬ್ಬಗಳು ಹಾಗೂ ರಾಷ್ಟ್ರೀಯ ದಿನಾಚರಣೆ ಸಂದರ್ಭಗಳಲ್ಲಿ ರಾಜ್ಯದ ಪ್ರಾಥಮಿಕ ಕೈಮಗ್ಗ ಸಹಕಾರ ಸಂಘಗಳು ಹಾಗೂ ರಾಜ್ಯ ಕೈಮಗ್ಗ ಮಹಾಮಂಡಳಗಳು ವಾರ್ಷಿಕ 180 ದಿನಗಳ ಅವಧಿಯಲ್ಲಿ ಮಾರಾಟ ಮಾಡಿದ ಕೈಮಗ್ಗ ಉತ್ಪನ್ನಗಳಿಗೆ ಶೇಕಡ 20 ರಿಬೇಟ್ನ್ನು ರಾಜ್ಯ ಸರ್ಕಾರ ವತಿಯಿಂದ ಮರುಪಾವತಿಸಲಾಗುವುದು.
12 ) ಕೈಮಗ್ಗ ವಿಕಾಸ ಯೋಜನೆ
ಹಾಲಿ ಇರುವ ನೇಕಾರರು ಕೈಮಗ್ಗ ನೇಯ್ಗೆ ವೃತ್ತಿಯನ್ನು ಮುಂದುವರಿಸಿ ಅಭಿವೃದ್ಧಿ ಪಡಿಸಿಕೊಳ್ಳಲು ಹಾಗೂ ಯುವ ನೇಕಾರರನ್ನು ಕೈಮಗ್ಗ ನೇಯ್ಗೆ ವೃತ್ತಿಯೆಡೆಗೆ ಆಕರ್ಷಿಸುವ ಉದ್ದೇಶದಿಂದ ಹತ್ತಿ/ ರೇಷ್ಮೆ/ಉಣ್ಣೆ ಕ್ಷೇತ್ರದಲ್ಲಿ ಕೈಮಗ್ಗ ನೇಕಾರ ಸಹಕಾರ ಸಂಘಗಳು ಹಾಗೂ ಫಲಾನುಭವಿಗಳು ಹೊಸ ಕೈಮಗ್ಗ ಹಾಗೂ ಅಗತ್ಯ ಸಲಕರಣೆಗಳನ್ನು ಖರೀದಿಸಲು ಯಂತ್ರೋಪಕರಣಗಳ
ಘಟಕ ವೆಚ್ಚದ ಶೇಕಡ 75 ರಷ್ಟು ಹಣವನ್ನು ಸಹಾಯಧನವಾಗಿ ಪಡೆಯಬಹುದಾಗಿದೆ. ಉಳಿಕೆ ಶೇಕಡ 25 ರಷ್ಟು ಹಣವನ್ನು ಫಲಾನುಭವಿಗಳು ಆರ್ಥಿಕ ಸಂಸ್ಥೆ/ ಬ್ಯಾಂಕ್ ಸಾಲದ ಮೂಲಕ ಭರಿಸುವುದು.
13) ಜಿಲ್ಲಾ ಮಟ್ಟದ ಕೈಮಗ್ಗ ಮೇಳ ಆಯೋಜನೆ
ರಾಜ್ಯ ಸರ್ಕಾರವು ವಾರ್ಷಿಕವಾಗಿ ರಾಜ್ಯದ ಪ್ರಮುಖ ಹಬ್ಬಗಳು ಹಾಗೂ ರಾಷ್ಟ್ರೀಯ ದಿನಾಚರಣೆ ಸಂದರ್ಭಗಳಲ್ಲಿ ಶೇ.20 ರಿಯಾಯಿತಿ ದರದಲ್ಲಿ ಕೈಮಗ್ಗ ಉತ್ಪನ್ನಗಳ ಮಾರಾಟಕ್ಕೆ ನಿಗದಿಪಡಿಸಿದ 180 ದಿನಗಳಲ್ಲಿ ಆಯಾ ಜಿಲ್ಲೆಗಳಿಗೆ ಸಂಬಂಧಿಸಿದಂತೆ ಹೆಚ್ಚಿನ ವ್ಯಾಪಾರವಾಗುವ ಅವಧಿಗಳಲ್ಲಿ 8 ದಿನಗಳ ಮೇಳವನ್ನು ಆಯೋಜಿಸುವುದು.
14) ಕೈಮಗ್ಗ ನೇಕಾರರ ಸಹಕಾರ ಸಂಘಗಳಿಗೆ ಒಂದಾವರ್ತಿ ಪ್ರೋತ್ಸಾಹಧನ
ಕೈಮಗ್ಗ ನೇಕಾರರ ಸಹಕಾರ ಸಂಘಗಳು ಬ್ಯಾಂಕ್ಗಳಲ್ಲಿ ಹೂಡಿಕೆ ಮಾಡಿ ಸಾಲ ಎತ್ತುವ ಸಾಮಥ್ರ್ಯವನ್ನು ಹೆಚ್ಚಿಸಿಕೊಳ್ಳುವುದು ಹಾಗೂ ಸಂಘದ ಉತ್ಪಾದನಾ ಮತ್ತು ಮಾರಾಟ ಚಟುವಟಿಕೆಗಳ ವಹಿವಾಟನ್ನು ಅಭಿವೃದ್ಧಿಪಡಿಸಲು ಆವರ್ತಕ ನಿಧಿಯನ್ನು ಕೈಮಗ್ಗ ನೇಕಾರರ ಸಹಕಾರ ಸಂಘಗಳಿಗೆ ಹಿಂದಿನ 3 ವರ್ಷಗಳ ಸರಾಸರಿ ವಹಿವಾಟಿನ ಮೇಲೆ ಶೇ.50 ರಷ್ಟನ್ನು ರೂ.5.00 ಲಕ್ಷಗಳ ಗರಿಷ್ಠ ಮಿತಿಗೆ ಒಳಪಟ್ಟು ನೀಡಲಾಗುವುದು.
15) ಕೈಮಗ್ಗಗಳಿಗೆ ನ್ಯೂಮ್ಯಾಟಿಕ್ / ಮೋಟರೈಸ್ಡ್ ಜಕಾರ್ಡ್ ಸಲಕರಣೆಗಳ ಕಿಟ್ ಒದಗಿಸುವುದು.
ಪ್ರಸ್ತುತ ಕೈಮಗ್ಗಗಳನ್ನು ಹೊಂದಿರುವ ಘಟಕಗಳಿಗೆ ನೇಕಾರರ ಹೆಚ್ಚಿನ ಪರಿಶ್ರಮವನ್ನು ತಪ್ಪಿಸಿ ಹೆಚ್ಚಿನ ಉತ್ಪಾದನೆ ಹಾಗೂ ಗುಣಮಟ್ಟದ ಉತ್ಪಾದನೆಗೆ ಅನುಕೂಲವಾಗುವಂತೆ ನ್ಯೂಮ್ಯಾಟಿಕ್ / ಮೋಟರೈಸ್ಡ್ ಜಕಾರ್ಡ್ ಸಲಕರಣೆಗಳ ಕಿಟ್ನ್ನು ಒದಗಿಸಲು ಪ್ರತಿ ಘಟಕಕ್ಕೆ ವೆಚ್ಚವಾಗುವ ಮೊತ್ತಕ್ಕೆ ಸರ್ಕಾರದ ವತಿಯಿಂದ ಸಾಮಾನ್ಯ ವರ್ಗದವರಿಗೆ ಶೇ.50 ರಷ್ಟು ಸಹಾಯಧನ ಹಾಗೂ ಪರಿಶಿಷ್ಠ ಜಾತಿ / ಪರಿಶಿಷ್ಟ
ಪಂಗಡದ ಫಲಾನುಭವಿಗಳಿಗೆ ಶೇ.90 ರಷ್ಟು ಸಹಾಯಧನವನ್ನು ಒದಗಿಸುವುದು.
16) ಕೈಮಗ್ಗಗಳ ವಿನ್ಯಾಸಗಳ ಉನ್ನತೀಕರಣಕ್ಕಾಗಿ ಎಲೆಕ್ಟ್ರಾನಿಕ್ ಜಕಾರ್ಡ್ ಒದಗಿಸುವುದು.
ಪ್ರಸ್ತುತ ಕೈಮಗ್ಗಗಳನ್ನು ಹೊಂದಿರುವ ಘಟಕಗಳಿಗೆ ಹಳೆಯ ಯಾಂತ್ರಿಕ ಜಕಾರ್ಡ್ಗಳ ಬದಲಾಗಿ ಹೊಸ ಮಾದರಿಯ ಎಲೆಕ್ಟ್ರಾನಿಕ್ ಜಕಾರ್ಡ್ಗಳನ್ನು ಬಳಸುವುದರಿಂದ ಹೆಚ್ಚಿನ ಉತ್ಪಾದನೆಯನ್ನು ಮಾಡಬಹುದು ಹಾಗೂ ಪ್ರತಿ ಸಾರಿ ಹೊಸ ವಿನ್ಯಾಸ ಬದಲಾವಣೆಯ ಸಮಯದ ಸಂದರ್ಭದಲ್ಲಿ ಆಗುವ ವೆಚ್ಚದ ಹಾಗೂ ಸಮಯವನ್ನು ಉಳಿತಾಯ ಮಾಡಬಹುದು. ಪ್ರತಿ ಘಟಕಕ್ಕೆ ವೆಚ್ಚವಾಗುವ ಮೊತ್ತಕ್ಕೆ ಸರ್ಕಾರದ ವತಿಯಿಂದ ಸಾಮಾನ್ಯ ವರ್ಗದವರಿಗೆ ಶೇ.50 ರಷ್ಟು ಸಹಾಯಧನ ಹಾಗೂ ಪರಿಶಿಷ್ಠ ಜಾತಿ / ಪರಿಶಿಷ್ಟ ಪಂಗಡದ ಫಲಾನುಭವಿಗಳಿಗೆ ಶೇ.90 ರಷ್ಟು ಸಹಾಯಧನವನ್ನು ಒದಗಿಸುವುದು.
17) ನೇಕಾರರ ಸಮ್ಮಾನ್ ಯೋಜನೆ
ಕೈಮಗ್ಗ ನೇಕಾರಿಕೆ ಹಾಗೂ ಇತರ ಕೈಮಗ್ಗ ಚಟುವಟಿಕೆಗಳನ್ನು ನಡೆಸುವ ಕೈಮಗ್ಗ ನೇಕಾರರಿಗೆ
"ನೇಕಾರ ಸಮ್ಮಾನ್ ಯೋಜನೆ" ಯಡಿ ರೂ.2,000/- ಗಳ ಆರ್ಥಿಕ ನೆರವನ್ನು ವಾರ್ಷಿಕವಾಗಿ ನೇರ
ನಗದು ವರ್ಗಾವಣೆ ಮುಖಾಂತರ ನೀಡುವ ಯೋಜನೆಯನ್ನು 2022-23 ನೇ ಸಾಲಿಗೆ ರೂ.5,000/-
ಗಳಿಗೆ ಹೆಚ್ಚಿಸಲಾಗಿದೆ.
ಕೈಮಗ್ಗಗಳ ಜಿಲ್ಲವಾರು ವಿವರಗಳು | ಡೌನ್‍ಲೋಡ್ |
---|
ಶೀರ್ಷಿಕೆ | ವಿವರ | |
---|---|---|
ಕೈಮಗ್ಗ ಯೋಜನೆಯ ಮುಖ್ಯಾಂಶಗಳು | ಡೌನ್‍ಲೋಡ್ | |
ರಾಷ್ಟ್ರೀಯ ಕೈಮಗ್ಗ ಅಭಿವೃದ್ದಿ ಕಾರ್ಯಕ್ರಮ ಅಡಿಯಲ್ಲಿ ಹೆಚ್.ಎಸ್.ಎಸ್ ಮತ್ತು ಬಿ.ಎಲ್.ಡಿ.ಎಸ್ ಮಾರ್ಗಸೂಚಿ. | ಡೌನ್‍ಲೋಡ್ | |
ಶೇ.1&3ರ ರಿಯಾಯಿತಿ ದರದಲ್ಲಿ ನೇಕಾರರಿಗೆ ಸಾಲ | ಡೌನ್‍ಲೋಡ್ | |
2017-18ನೇ ಸಾಲಿನ ರಿಬೇಟ್ ಯೋಜನೆಯ ಮಾರ್ಗಸೂಚಿ | ಡೌನ್‍ಲೋಡ್ | |
ಎಲೆಕ್ಟ್ರಾನಿಕ್ ಜಕಾರ್ಡ್ ನ್ಯೂಮ್ಯಾಟಿಕ್ ಕಿಟ್ ಮಾರ್ಗಸೂಚಿ | ಡೌನ್‍ಲೋಡ್ | |
ಕೈಗಾರಿಕಾ ವಿಕಾಸ ಯೋಜನೆ | ಡೌನ್‍ಲೋಡ್ | |
ರಾಷ್ಟ್ರೀಯ ಕೈಮಗ್ಗ ಅಭಿವೃದ್ದಿ ಯೋಜನೆಯ ಹೊಸ ಮಾರ್ಗಸೂಚಿ | ಡೌನ್‍ಲೋಡ್ | |
ನೇಕಾರರ ಕಲ್ಯಾಣ ಯೋಜನೆಯ ಮಾರ್ಗಸೂಚಿ | ಡೌನ್‍ಲೋಡ್ | |
ಪಂಜಾಬ್ ನ್ಯಾಷನಲ್ ಬ್ಯಾಂಕ್ ನೇಕಾರರ ಮುದ್ರಾ ಯೋಜನೆ | ಡೌನ್‍ಲೋಡ್ | |
ನೇಕಾರರ ವಿಶೇಷ ಪ್ಯಾಕೇಜ್- ಹೊಸ ಘಟಕಗಳು | ಡೌನ್‍ಲೋಡ್ | |
ಹ್ಯಾಂಕ್ ನೂಲಿನ ಬಾದ್ಯತೆ ಕಾಯ್ದೆ | ಡೌನ್‍ಲೋಡ್ | |
ಸಾಧನೆ- ಬಜೆಟ್ ಹ್ಯಾಂಕ್ ನೂಲಿನ ಬಾದ್ಯತೆ | ಡೌನ್‍ಲೋಡ್ | |
ಮಿತವ್ಯಯ ನಿಧಿ ಯೋಜನೆ |
ಡೌನ್‍ಲೋಡ್ 1
ಡೌನ್‍ಲೋಡ್ 2 ಡೌನ್‍ಲೋಡ್ 3 |
|
ನೇಕಾರ ಸಮ್ಮಾನ್ ಯೋಜನೆ (2020-2021) | ಡೌನ್‍ಲೋಡ್ | |
ನೇಕಾರ ಸಮ್ಮಾನ್ ಯೋಜನೆ (2021-2022) | ಡೌನ್‍ಲೋಡ್ | |
ನೇಕಾರ ಸಮ್ಮಾನ್ ಯೋಜನೆ (2022-2023) | ಡೌನ್‍ಲೋಡ್ |