ರಾಜ್ಯ ಸರ್ಕಾರದ ನೂತನ ಜವಳಿ ನೀತಿ 2013-18ರ ಅವಧಿಯಲ್ಲಿ ರೂ.10000 ಕೋಟಿ ಬಂಡವಾಳ ಹೂಡಿಕೆ ಆಕರ್ಷಣೆ ಹಾಗೂ 5,00,000 ಜನರಿಗೆ ಉದ್ಯೋಗ ನೀಡುವ ಮಹತ್ತರ ಗುರಿಯನ್ನು ಹೊಂದಲಾಗಿರುತ್ತದೆ. ಸದರಿ ನೀತಿಯಡಿ ಕರ್ನಾಟಕ ರಾಜ್ಯದಲ್ಲಿ ಒಟ್ಟಾರೆ 144 ಸರ್ಕಾರಿ ಎಸ್‍ಡಿಸಿ ಕೇಂದ್ರಗಳನ್ನು ಸರ್ಕಾರದ ಅನುದಾನ ತಲಾ ರೂ.27.00 ಲಕ್ಷದೊಂದಿಗೆ ಮತ್ತು 168 ಖಾಸಗಿ ತರಬೇತಿ ಕೇಂದ್ರಗಳು ಸ್ವಂತ ಯಂತ್ರೋಪಕರಣ ಹಾಗೂ ಮೂಲಸೌಕರ್ಯ ಹೊಂದಿದ್ದು ಇವು ಸೇರಿದಂತೆ ಒಟ್ಟಾರೆ 312 ಕೌಶಲ್ಯಾಭಿವೃದ್ಧಿ ತರಬೇತಿ ಕೇಂದ್ರಗಳನ್ನು ವಿವಿಧ ಜಿಲ್ಲೆಗಳಲ್ಲಿನ ವಿವಿಧ ತಾಲ್ಲೂಕುಗಳಲ್ಲಿ ಸ್ಥಾಪನೆ ಮಾಡಲಾಗಿರುತ್ತದೆ. ಈ ಕೇಂದ್ರಗಳ ಮೂಲಕ ನೂತನ ಜವಳಿ ನೀತಿ 2013-18ರಡಿಯಲ್ಲಿ 45 ದಿವಸಗಳ ಸೀವಿಂಗ್ ಮೆಶಿನ್ ಆಪರೇಟರ್, ಕೈಮಗ್ಗನೇಯ್ಗೆ, ಮತ್ತು ವಿದ್ಯುತ್‍ಮಗ್ಗ ನೇಯ್ಗೆ ವೃತ್ತಿಯಡಿ ಕೌಶಲ್ಯಾಭಿವೃದ್ದಿ ತರಬೇತಿ ಕಾರ್ಯಕ್ರಮವನ್ನು ಅನುಷ್ಟಾನ ಮಾಡಲಾಗುತ್ತಿದೆ. ಈ ಯೋಜನೆಯಡಿ ಸರ್ಕಾರಿ ಎಸ್.ಡಿ.ಸಿ ಕೇಂದ್ರಗಳಿಗೆ ತರಬೇತಿ ವೆಚ್ಚ ರೂ.9,500/- ಮತ್ತು ಖಾಸಗಿ ತರಬೇತಿ ಕೇಂದ್ರಗಳಿಗೆ ತರಬೇತಿ ವೆಚ್ಚ ರೂ.11,000/- ಪ್ರತಿ ಅಭ್ಯರ್ಥಿಗೆ ನೀಡಲಾಗುವುದು. ತರಬೇತಿ ಅವಧಿಯಲ್ಲಿ ಅಭ್ಯರ್ಥಿಗಳಿಗೆ ರೂ.3,500/- ಶಿಷ್ಯವೇತನವನ್ನು ತರಬೇತಿ ಪೂರ್ಣಗೊಂಡ ನಂತರ ಒಂದೇ ಕಂತಿನಲ್ಲಿ ನೀಡಲಾಗುವುದು. ಸರ್ಕಾರಿ ಎಸ್.ಡಿ.ಸಿ ಕೇಂದ್ರವಾದ್ದಲ್ಲಿ, ಕಚ್ಚಾಮಾಲಿಗಾಗಿ ರೂ.1,000/- ಮತ್ತು ತರಬೇತಿ ಕೇಂದ್ರದವರಿಗೆ ರೂ.5,000/-ದಂತೆ ಅನುದಾನ ನೀಡಲಾಗುವುದು. ಅಲ್ಲದೇ, ಖಾಸಗಿ ತರಬೇತಿ ಕೇಂದ್ರವಾದ್ದಲ್ಲಿ ಕಚ್ಚಾಮಾಲಿಗಾಗಿ ರೂ.1,000/- ಮತ್ತು ತರಬೇತಿ ಕೇಂದ್ರದವರಿಗೆ ರೂ.6,500/-ರಂತೆ ಅನುದಾನ ನೀಡಲಾಗುವುದು. ತರಬೇತಿ ಕೇಂದ್ರದವರಿಗೆ ನೀಡಲಾಗುವ ಅನುದಾನವನ್ನು 2 ಮೈಲುಗಲ್ಲುಗಳಲ್ಲಿ ಅಂದರೆ ತರಬೇತಿ ಪೂರ್ಣಗೊಂಡ ನಂತರ ಶೇ.50ರಷ್ಟು 1ನೇ ಕಂತಿನ ಅನುದಾನ ಮತ್ತು ತರಬೇತಿಗೊಂಡ ಅಭ್ಯರ್ಥಿಗಳು ಉದ್ಯೋಗ ಪಡೆದುಕೊಂಡ ನಂತರ ಶೇ.50ರಷ್ಟು 2ನೇ ಕಂತಿನ ಅನುದಾನ ಬಿಡುಗಡೆ ಮಾಡಲಾಗುವುದು. ಅಭ್ಯರ್ಥಿಗಳು ತರಬೇತಿ ಪಡೆದ ಮೇಲೆ ಗಾರ್ಮೆಂಟ್ ಕೈಗಾರಿಕೆಗಳಲ್ಲಿ ಉದ್ಯೋಗವಕಾಶವನ್ನು ಕಲ್ಪಿಸಲಾಗುವುದು. ಸ್ವಂತ ಉದ್ದಿಮೆಯನ್ನು ಪ್ರಾರಂಭಿಸುವವರಿಗೆ ಉದ್ಯಮಶೀಲತಾ ತರಬೇತಿ ನೀಡಿ ಸ್ವಯಂ ಉದ್ಯೋಗ ಪ್ರಾರಂಭ ಮಾಡಲು ಇಲಾಖೆಯಿಂದ ಮಾರ್ಗದರ್ಶನ ನೀಡಿ ಗಾರ್ಮೆಂಟ್ ಕೈಗಾರಿಕೆಯನ್ನು ಪ್ರಾರಂಭಿಸಿದ ಮೇಲೆ ನೂತನ ಜವಳಿ ನೀತಿ 2013-18ರಡಿಯಲ್ಲಿ ವಿವಿಧ ಪ್ರೋತ್ಸಾಹನ ಮತ್ತು ರಿಯಾಯಿತಿಗಳನ್ನು ಅರ್ಹತೆ ಆಧಾರದ ಮೇಲೆ ಒದಗಿಸಲಾಗುವುದು.
ಶೀರ್ಷಿಕೆ | ವಿವರ |
---|---|
ಜವಳಿ ಯೋಜನೆಯ ಮುಖ್ಯಾಂಶಗಳು | ಡೌನ್‍ಲೋಡ್ |
ನೂತನ ಜವಳಿ ನೀತಿ – ತರಬೇತಿ ಕಾರ್ಯಕ್ರಮದ ಷರತ್ತು ಮತ್ತು ನಿಬಂಧನೆಗಳು | ಡೌನ್‍ಲೋಡ್ |
ಖಾಸಗಿ ತರಬೇತಿ ಕೇಂದ್ರಗಳ ಪಟ್ಟಿ | ಡೌನ್‍ಲೋಡ್ |
ಸರ್ಕಾರಿ ಎಸ್‍ಡಿಸಿ ತರಬೇತಿ ಕೇಂದ್ರಗಳ ಪಟ್ಟಿ | ಡೌನ್‍ಲೋಡ್ |
ತರಬೇತಿ ಕೇಂದ್ರಗಳ ಪಟ್ಟಿ | ಡೌನ್‍ಲೋಡ್ |
ಜಿ.ಆರ್.ಟಿ.ಡಿ.ಸಿ. ಬಳ್ಳಾರಿ | ಡೌನ್‍ಲೋಡ್ |
ಕೆ.ಹೆಚ್.ಟಿ.ಐ. ಜಮಖಂಡಿ | ಡೌನ್‍ಲೋಡ್ |
ಕೆ.ಹೆಚ್.ಟಿ.ಐ. ಗದಗ | ಡೌನ್‍ಲೋಡ್ |
ಪರಿಷ್ಕೃತ ತರಬೇತಿ ವೆಚ್ಚ ಪಟ್ಟಿ | ಡೌನ್‍ಲೋಡ್ |
ಹೊಲಿಗೆ ಯಂತ್ರ ಅಪರೇಟರ್ ಕೈಪಿಡಿ | ಡೌನ್‍ಲೋಡ್ |
ಎಸ್‍ಎಂಒ ತರಬೇತಿ ಪಠ್ಯಕ್ರಮ | ಡೌನ್‍ಲೋಡ್ |
ಎಸ್‍ಎಂಒ ತರಬೇತಿ ಛಾಯಾ ಚಿತ್ರಗಳು | ಡೌನ್‍ಲೋಡ್ |
ಕ್ರ. ಸಂ | ವಿವರ |
---|---|
1 | ಹೊಲಿಗೆ ಯಂತ್ರ ಅಪರೇಟರ್ ತರಬೇತಿ ಪಡೆಯುತ್ತಿರುವ ಅಭ್ಯರ್ಥಿಗಳ ಮತ್ತು ತರಬೇತಿ ನೀಡುತ್ತಿರುವ ಕೇಂದ್ರಗಳ ಛಾಯಾ ಚಿತ್ರಗಳು. |
2 | ಉಣ್ಣೆ ನೂಲುವಿಕೆ ಮತ್ತು ನೇಯ್ಗೆ ತರಬೇತಿ ಪಡೆಯುತ್ತಿರುವ ಅಭ್ಯರ್ಥಿಗಳ ಮತ್ತು ತರಬೇತಿ ನೀಡುತ್ತಿರುವ ಕೇಂದ್ರಗಳ ಛಾಯಾ ಚಿತ್ರಗಳು. |
3 | ಕೈಮಗ್ಗ ನೇಯ್ಗೆ ತರಬೇತಿ ಪಡೆಯುತ್ತಿರುವ ಅಭ್ಯರ್ಥಿಗಳ ಮತ್ತು ತರಬೇತಿ ನೀಡುತ್ತಿರುವ ಕೇಂದ್ರಗಳ ಛಾಯಾ ಚಿತ್ರಗಳು. |
4 | ವಿದ್ಯುತ್‍ಮಗ್ಗ ನೇಯ್ಗೆ ತರಬೇತಿ ಪಡೆಯುತ್ತಿರುವ ಅಭ್ಯರ್ಥಿಗಳ ಮತ್ತು ತರಬೇತಿ ನೀಡುತ್ತಿರುವ ಕೇಂದ್ರಗಳ ಛಾಯಾ ಚಿತ್ರಗಳು. |
ಜವಳಿ ಕ್ಷೇತ್ರವು ದೇಶದ ಆರ್ಥಿಕತೆಯಲ್ಲಿ ಮಹತ್ತರವಾದ ಪಾತ್ರ ವಹಿಸಿದೆ. ದೇಶದ ಒಟ್ಟು ಶೇ.14ರಷ್ಟು ಜವಳಿ ಉತ್ಪಾದನೆಯಾಗುತ್ತಿದ್ದು, ಶೇ.4ರಷ್ಟು ಜಿ.ಡಿ.ಪಿ ವೃದ್ದಿಯಾಗಿರುತ್ತದೆ. ಈ ಕ್ಷೇತ್ರದಲ್ಲಿ 45 ಮಿಲಿಯನ್ ಜನರು ಉತ್ಪಾದನೆಯಲ್ಲಿ ತೊಡಗಿರುತ್ತಾರೆ. ಈ ಕ್ಷೇತ್ರವು ನಿರುದ್ಯೋಗಸ್ಥರಿಗೆ ಹೆಚ್ಚಿನ ಉದ್ಯೋಗ ದೊರಕಿಸಿಕೊಡುವಂತಹ ಕ್ಷೇತ್ರವಾಗಿರುತ್ತದೆ. ದೇಶದ ಒಟ್ಟಾರೆ ಶೇ.15ರಷ್ಟು ಜವಳಿ ಉತ್ಪನ್ನಗಳು ರಪ್ತಾಗುತ್ತಿರುತ್ತವೆ. 2016ನೇ ಸಾಲಿನಲ್ಲಿ ಭಾರತದ ಜವಳಿ ಮಾರುಕಟ್ಟೆಯು 137 ಯು.ಎಸ್ ಬಿಲಿಯನ್ ಡಾಲರ್ ಮೊತ್ತದಷ್ಟು ಉತ್ಪಾದನೆಯಾಗಿರುತ್ತದೆ ಹಾಗೂ 2023ರ ಅವಧಿಗೆ ಒಟ್ಟು 226 ಯು.ಎಸ್ ಬಿಲಿಯನ್ ಡಾಲರ್ ಜವಳಿ ಉತ್ಪಾದನೆಯಾಗುವ ಅಂದಾಜು ಮಾಡಲಾಗಿರುತ್ತದೆ. 2009ರಿಂದ 2023ರವರೆಗೆ ಸಿ.ಎ.ಜಿ.ಆರ್ ಶೇ.8.7ರಷ್ಟು ವೃದ್ದಿಯಾಗಿರುತ್ತದೆ. ಕರ್ನಾಟಕ ರಾಜ್ಯವು ಜವಳಿ ಕ್ಷೇತ್ರದಲ್ಲಿ ಅದರಲ್ಲೂ ಸಿದ್ದ ಉಡುಪು ತಯಾರಿಕೆಯಲ್ಲಿ ದೇಶದ ಒಟ್ಟು ಉತ್ಪಾದನೆಯಲ್ಲಿ ಹೆಚ್ಚಿನ ಪಾಲು ಕರ್ನಾಟಕದ್ದಾಗಿರುತ್ತದೆ. ಕರ್ನಾಟಕ ಸರ್ಕಾರವು ಕೈಮಗ್ಗ ಮತ್ತು ಜವಳಿ ಇಲಾಖಾ ವತಿಯಿಂದ ಉತ್ತಮವಾದ ಮತ್ತು ಆಕರ್ಷಣೀಯವಾದ ಜವಳಿ ನೀತಿಯನ್ನು ರೂಪಿಸಿ ಹೆಚ್ಚಿನ ಬಂಡವಾಳವನ್ನು ಈ ಕ್ಷೇತ್ರದಿಂದ ಆಕರ್ಷಿಸಲು ಸಹಕಾರಿಯಾಗಿರುತ್ತದೆ. ಕರ್ನಾಟಕ ರಾಜ್ಯವು ಬಂಡವಾಳ ಹೂಡಿಕೆ ಮಾಡಲು ಉತ್ತಮ ವಾತಾವರಣ ಕಲ್ಪಿಸಲಾಗಿದೆ. ಕರ್ನಾಟಕ ರಾಜ್ಯವು ಜವಳಿ ಕ್ಷೇತ್ರದಲ್ಲಿ ಸಿದ್ದ ಉಡುಪು ತಯಾರಿಕೆ, ಸ್ಪಿನ್ನಿಂಗ್ ಮತ್ತು ಜಿನ್ನಿಂಗ್, ನೇಯ್ಗೆ, ತಾಂತ್ರಿಕ ಜವಳಿ ಹೀಗೆ ಹಲವಾರು ಕ್ಷೇತ್ರಗಳಲ್ಲಿ ಬಂಡವಾಳ ಹೂಡಿಕೆ ಮಾಡುವ ಉದ್ದಿಮೆದಾರರಿಗೆ ನೀತಿಯಲ್ಲಿ ಹೆಚ್ಚಿನ ಪ್ರೋತ್ಸಾಹನ ಮತ್ತು ರಿಯಾಯತಿಗಳನ್ನು ನೀಡಲು ಅವಕಾಶವಿರುತ್ತದೆ. ಕರ್ನಾಟಕ ಉದ್ಯೋಗ ಮಿತ್ರವು ಬೃಹತ್ ಕೈಗಾರಿಕೆಗಳನ್ನು ಹಾಗೂ ಜವಳಿ ಪಾರ್ಕ್‍ಗಳನ್ನು ನಿರ್ಮಿಸುವ ಉದ್ದಿಮೆದಾರರಿಗೆ ಏಕಗವಾಕ್ಷಿಯಾಗಿ ಕಾರ್ಯ ನಿರ್ವಹಿಸುತ್ತಾ ಜಾಗ ನೀಡುವಲ್ಲಿ ಮಹತ್ವದ ಪಾತ್ರ ವಹಿಸುತ್ತಿರುತ್ತದೆ.
I. 227 ಹತ್ತಿ ಕೈಮಗ್ಗ ನೇಕಾರರ ಸಹಕಾರ ಸಂಘಗಳು
II. 88 ರೇಷ್ಮೆ ಕೈಮಗ್ಗ ನೇಕಾರರ ಸಹಕಾರ ಸಂಘಗಳು
III. 138 ಉಣ್ಣೆ ಕೈಮಗ್ಗ ನೇಕಾರರ ಸಹಕಾರ ಸಂಘಗಳು
IV. 90 ವಿದ್ಯುತ್‍ಮಗ್ಗ ಸಹಕಾರ ಸಂಘಗಳು
ಹೊಸ ಜವಳಿ ನೀತಿಯನ್ನು ಇಲ್ಲಿ ಕಾಣಬಹುದು :
ಕ್ರ ಸಂ. | ಘಟಕದ ಹೆಸರು | ಘಟಕದ ಸಂಖ್ಯೆ | ಉದ್ಯೋಗದ ಸಂಖ್ಯೆ |
---|---|---|---|
1 | ಶಾಹಿ ಎಕ್ಸ್‍ಪೋಟ್ರ್ಸ್ | 48 | 80,000 |
2 | ಗೋಕುಲ್‍ದಾಸ್ | 26 | 30,000 |
3 | ಅರವಿಂದ್ ಗ್ರೂಪ್ | 9 | 15,000 |
4 | ಎಲ್.ಟಿ.ಕಾರ್ಲೆ | 2 | 3000 |
5 | ಜಾಕಿ (ಇಂಡಿಯಾ) | 18 | 20,000 |
6 | ಗೋ ಗೋ ಇಂಟರ್‍ನ್ಯಾಷನಲ್ | 1 | 2000 |
7 | ಬಾಂಬೆ ರೇಯಾನ್ | 6 | 10,000 |
8 | ಟೆಕ್ಸ್‍ಪೋರ್ಟ್ ಸಿಂಡಿಕೇಟ್ | 7 | 8500 |
9 | ಟೆಕ್ಸ್‍ಪೋರ್ಟ್ ಒವರ್‍ಸೀಸ್ | 7 | 10,000 |
10 | ಮಂದಾನ ಗಾರ್ಮೆಂಟ್ಸ್ | 5 | 4500 |
ಶೀರ್ಷಿಕೆ (ಜಿಲ್ಲಾವಾರು ವಿವರ) | ವಿವರ |
---|---|
ನೂತನ ಜವಳಿ ನೀತಿಯ ಮಾರ್ಗಸೂಚಿಗಳು | ಡೌನ್‍ಲೋಡ್ |
ಜಿಲ್ಲಾವಾರು ಸಿದ್ದ ಉಡುಪು ಘಟಕಗಳ ವಿವರ | ಡೌನ್‍ಲೋಡ್ |
ಘಟಕಗಳ ಛಾಯಾಚಿತ್ರಗಳು | ಡೌನ್‍ಲೋಡ್ |
ಹಾವೇರಿ ಜಿಲ್ಲಾ ವರದಿ | ಡೌನ್‍ಲೋಡ್ |
ಸಿದ್ದ ಉಡುಪು ಘಟಕಗಳ ಮುಖ್ಯ ಮಾಹಿತಿ | ಡೌನ್‍ಲೋಡ್ |
ಜವಳಿ ಘಟಕಗಳ ಹೆಗ್ಗುರುತು | ಡೌನ್‍ಲೋಡ್ |
ಮೆಗಾ ಪ್ರಾಜೆಕ್ಟ್ ವರದಿ | ಡೌನ್‍ಲೋಡ್ |
ಡಿ.ಐ.ಟಿ.ಪಿ ಪಾರ್ಕ್‍ನ ಮಾಹಿತಿ | ಡೌನ್‍ಲೋಡ್ |
ತಾಂತ್ರಿಕ ಜವಳಿ | ಡೌನ್‍ಲೋಡ್ |
ಜವಳಿ ಪಾರ್ಕ್‍ಗಳ ಸ್ಥಿತಿಗತಿ | ಡೌನ್‍ಲೋಡ್ |
ಪ್ರಸ್ತಾವಿತ ಜವಳಿ ಪಾರ್ಕ್‍ಗಳ ವಿವರ | ಡೌನ್‍ಲೋಡ್ |