ಭಾರತದ ಜವಳಿ ಉತ್ಪಾಧನೆಯಲ್ಲಿ ಶೇ.5 ಸಂಘಟಿತ ವಲಯ, ಶೇ.20 ಕೈಮಗ್ಗ ವಲಯ, ಶೇ.15 ನಿಟ್ಟಿಂಗ್ ವಲಯ ಮತ್ತು ಶೇ.50 ಅಸಂಘಟಿತ ವಿದ್ಯುತ್ ಮಗ್ಗ ವಲಯದಲ್ಲಿ ಉತ್ಪಾಧನೆಯಾಗುತ್ತಿದೆ. ಕರ್ನಾಟಕದಲ್ಲಿ ವಿದ್ಯುತ್ ಮಗ್ಗ ವಲಯವು ಪ್ರಮುಖವಾಗಿದ್ದು, ಸುಮಾರು 1,20,000 ಮಗ್ಗಗಳು ರೇಷ್ಮೆ ಮತ್ತು ಹತ್ತಿ ನೇಯ್ಗೆಯಲ್ಲಿ ತೊಡಗಿರುತ್ತದೆ. ವಿದ್ಯುತ್ ಮಗ್ಗವು ಪ್ರಮುಖವಾಗಿ ಬೆಳಗಾವಿ, ಬಾಗಲಕೋಟೆ, ತುಮಕೂರು, ಬೆಂಗಳೂರು ನಗರ & ಗ್ರಾಮಾಂತರ ಜಿಲ್ಲೆಗಳಲ್ಲಿ ಸಾಂಧ್ರೀಕರಿಸಿದೆ. ಇಲಾಖೆಯು ವಿದ್ಯುತ್ ಮಗ್ಗಗಳನ್ನು ಆಧುನೀಕರಿಸಿ ಅಗತ್ಯ ನೆರವನ್ನು ನೀಡಲು ಒತ್ತು ನೀಡುತ್ತಿದೆ. ವಿದ್ಯುತ್ ಮಗ್ಗ ಕ್ಷೇತ್ರದ ಅಭಿವೃದ್ದಿಗೆ ಒತ್ತು ನೀಡಲು ಕರ್ನಾಟಕ ರಾಜ್ಯ ಜವಳಿ ಮೂಲಸೌಲಭ್ಯ ಅಭಿವೃದ್ದಿ ನಿಗಮವನ್ನು ಸ್ಥಾಪಿಸಲಾಗಿರುತ್ತದೆ. ವಿದ್ಯುತ್ ಮಗ್ಗ ಕ್ಷೇತ್ರದ ಅಭಿವೃದ್ದಿಗೆ ಸಹಕರಿಸಲು ಇಲಾಖೆಯು ಕೆಳಕಂಡ ಯೋಜನೆಗಳನ್ನು ಅನುಷ್ಠಾನಗೊಳಿಸುತ್ತಿದೆ.
ನೇಕಾರರ ವಿಶೇಷ ಪ್ಯಾಕೇಜ್ ಯೋಜನೆಯಡಿ ನೇಕಾರ ಫಲಾನುಭವಿಗಳು ಸ್ವಯಂ ಉದ್ಯೋಗ ಕೈಗೊಂಡು ಸಮಾಜದ ಮುಖ್ಯ ವಾಹಿನಿಗೆ ಬರಲು ಅನುಕೂಲವಾಗುವಂತೆ ಪ್ರಮುಖವಾಗಿ ಕೆಳಕಂಡ ಫಲಾನುಭವಿ ಆಧಾರಿತ ಉಪ ಯೋಜನೆಗಳನ್ನು ಅನುಷ್ಠಾನಗೊಳಿಸಲಾಗುತ್ತಿದೆ.
01. ವಿದ್ಯುತ್ ಮಗ್ಗ ಖರೀದಿಗೆ ಸಹಾಯಧನ
ಕ್ರ.ಸಂ | ವಿವರ |
|
|||||
---|---|---|---|---|---|---|---|
1 | ಕೈಮಗ್ಗ ಮತ್ತು ಜವಳಿ ಇಲಾಖೆಯ ಸಹಾಯಧನ | 1.00 | 1.00 | ||||
2 | ರಾಜೀವ್ ಗಾಂಧಿ ಗ್ರಾಮೀಣ ವಸತಿ ನಿಗಮದ ಸಹಾಯಧನ | 1.20 | 1.20 | ||||
3 | ಫಲಾನುಭವಿಯ ಕೊಡುಗೆ | 0.30 | 0.30 | ||||
ಒಟ್ಟು | 2.50 | 2.50 |
04. ವಿದ್ಯುತ್ ರಿಯಾಯಿತಿ ಸಹಾಯಧನ
01 ರಿಂದ 20 ಹೆಚ್.ಪಿ ವರೆಗಿನ ವಿದ್ಯುತ್ ಸಂಪರ್ಕ ಹೊಂದಿರುವ ಮಗ್ಗ ಹಾಗೂ ಮಗ್ಗಪೂರ್ವ ಘಟಕಗಳಿಗೆ ಪ್ರತಿ ಯೂನಿಟ್‍ಗೆ ರೂ.1.25 ರಿಯಾಯಿತಿ ದರದಲ್ಲಿ ವಿದ್ಯುತ್ ಸರಬರಾಜು ಮಾಡುತ್ತಿದ್ದು, ಉಳಿಕೆ ಮೊಬಲಗನ್ನು ಸರ್ಕಾರವು ಭರಿಸುತ್ತಿದೆ.
05. ಜವಳಿ ಉದ್ದಿಮೆಯಲ್ಲಿ ಎಸ್.ಎಂ.ಇ ಯೂನಿಟ್ ಪ್ರಾರಂಭಿಸುವ ಉದ್ದಿಮೆದಾರರು/ಸಂಘ/ ಸಂಸ್ಥೆ/ ಎಸ್.ಪಿ.ವಿಗೆ ಸಹಾಯಧನ ಒದಗಿಸುವುದು :
ಪರಿಶಿಷ್ಟ ಜಾತಿ / ಪಂಗಡದ ಫಲಾನುಭವಿಗಳು ಸ್ಥಾಪಿಸುವ ಎಸ್.ಎಂ.ಇ ಘಟಕ ಯೋಜನಾ ವೆಚ್ಚದ ಮೇಲೆ ಶೇ.75 ಸಹಾಯಧನ ಹಾಗೂ ಶೇ.15 ಬಡ್ಡಿ ಸಹಾಯಧನ ನೀಡಲಾಗುವುದು. ಉಳಿಕೆ ಶೇ.10 ಫಲಾನುಭವಿಯ ವಂತಿಕೆಯಾಗಿರುತ್ತದೆ.
ಸಮುದಾಯ ಆಧಾರಿತ ನೇಕಾರರ ವಿಶೇಷ ಪ್ಯಾಕೇಜ್ ಯೋಜನೆಗಳು
06. ಸಾಮಾನ್ಯ ಸೌಲಭ್ಯ ಕೇಂದ್ರ :
ನೇಕಾರ ಸಹಕಾರ ಸಂಘಗಳಿಗೆ ಸಾಮಾನ್ಯ ಸೌಲಭ್ಯ ಕೇಂದ್ರ ನಿರ್ಮಿಸಲು ಸಹಾಯಧನ ಒದಗಿಸಲಾಗುವುದು.
ವಿದ್ಯುತ್‍ಮಗ್ಗಗಳ ಜಿಲ್ಲಾವಾರು ವಿವರ | ಡೌನ್‍ಲೋಡ್ |
---|
ವಿದ್ಯುತ್ ಮಗ್ಗಗಳ ಜಿಲ್ಲಾವಾರು ವಿವರಗಳು ರಾಜ್ಯ ವಲಯ ಯೋಜನೆಗಳು |
ಡೌನ್‍ಲೋಡ್ ವಿವರಗಳು |
---|---|
ತರಬೇತಿ ಯೋಜನೆಯ ಮುಖ್ಯಾಂಶಗಳು | ಡೌನ್‍ಲೋಡ್ |
02 ವಿದ್ಯುತ್ ಮಗ್ಗ ಖರೀದಿ ಮಾರ್ಗಸೂಚಿ | ಡೌನ್‍ಲೋಡ್ / ಡೌನ್‍ಲೋಡ್ |
ರಾಪಿಯರ್-ಶಟಲ್ಲೆಸ್ ಲೂಮ್ಸ್ | ಡೌನ್‍ಲೋಡ್ |
ವಿದ್ಯುತ್ ಸಬ್ಸಿಡಿ ಜಿ ಒ | ಡೌನ್‍ಲೋಡ್ |
ಸಾಮಾನ್ಯ ಸೌಲಭ್ಯ ಕೇಂದ್ರ | ಡೌನ್‍ಲೋಡ್ |
ಎಕ್ಸ್‍ಪ್ರೆಸ್ ಫೀಡರ್ | ಡೌನ್‍ಲೋಡ್ |
ವಿದ್ಯುತ್‍ಮಗ್ಗಗಳ ಉನ್ನತೀಕರಣಕ್ಕಾಗಿ ಇನ್-ಸಿಟು ಯೋಜನೆ | ಡೌನ್‍ಲೋಡ್ |
ವಸತಿ ಕಾರ್ಯಗಾರ | ಡೌನ್‍ಲೋಡ್ |
ಮಿನಿ ಪವರ್‍ಲೂಮ್ ಪಾರ್ಕ್ | ಡೌನ್‍ಲೋಡ್ |
ವಿದ್ಯುತ್ ಮಗ್ಗ ಸಂಕೀರ್ಣ | ಡೌನ್‍ಲೋಡ್ |
ವಿಶೇಷ ಘಟಕ ಯೋಜನೆ – ಗಿರಿಜನ ಉಪಯೋಜನೆ | ಡೌನ್‍ಲೋಡ್ |
ವಿದ್ಯುತ್ ಮಗ್ಗ ಸಹಕಾರ ಸಂಘಗಳಿಗೆ ಷೇರು ಬಂಡವಾಳ | ಡೌನ್‍ಲೋಡ್ |
ಸೈಜಿಂಗ್ ಘಟಕ | ಡೌನ್‍ಲೋಡ್ |
ವಿಶೇಷ ಘಟಕ ಯೋಛಿಜನೆಯಡಿ ಎಸ್.ಎಂ.ಇ | ಡೌನ್‍ಲೋಡ್ |
ಪ್ರೋಸೆಸ್ಸಿಂಗ್ ಘಟಕ | ಡೌನ್‍ಲೋಡ್ |
ನೇಕಾರರ ವಿಶೇಷ ಪ್ಯಾಕೇಜ್ ಯೋಜನೆ - ಹೊಸ ಕಾಂಪೊನೆಂಟ್ | ಡೌನ್‍ಲೋಡ್ |
ಹಾವೇರಿ ಕಾಮಡೋಡು SDC | ಡೌನ್‍ಲೋಡ್ |
ನಿಧಿ ಮಾರ್ಗಸೂಚಿಗಳು | ಡೌನ್‍ಲೋಡ್ |
ಶಬ್ದ ಮಾಲಿನ್ಯ ಮಾರ್ಗಸೂಚಿಗಳು | ಡೌನ್‍ಲೋಡ್ |
ನೇಕಾರ ಸಮ್ಮಾನ್ ಯೋಜನೆ | ಡೌನ್‍ಲೋಡ್ |
ಕೋವಿಡ್-19 ಪ್ರಯುಕ್ತ ವಿದ್ಯುತ್ ಮಗ್ಗ ನೇಕಾರರಿಗೆ ಆರ್ಥಿಕ ಬೆಂಬಲ ನೀಡುವ ಯೋಜನೆ | ಡೌನ್‍ಲೋಡ್ ಡೌನ್‍ಲೋಡ್ ಡೌನ್‍ಲೋಡ್ ಡೌನ್‍ಲೋಡ್ |