ವಸತಿ ಕಾರ್ಯಾಗಾರ ಯೋಜನೆ
ವಸತಿ ರಹಿತ ನೇಕಾರರ ತಲೆಯ ಮೇಲೆ ಒಂದು ಸೂರನ್ನು ನೀಡುವ ಪ್ರಮುಖ ಉದ್ದೇಶದಿಂದ 2009-10ನೇ ಸಾಲಿನ ಆಯವ್ಯಯದಲ್ಲಿ “ವಸತಿ ವ ಕಾರ್ಯಾಗಾರ” ಯೋಜನೆಯನ್ನು ಘೋಷಿಸಲಾಗಿರುತ್ತದೆ. ನೇಕಾರರು ನೇಯ್ಗೆ ವೃತ್ತಿಯನ್ನು ಉತ್ತಮ ಪರಿಸರದಲ್ಲಿ ನಿರ್ವಹಿಸಲು ಹಾಗೂ ಅವರಿಗೆ ವಾಸಿಸಲು ಅನುಕೂಲವಾಗುವಂತೆ ವಸತಿ ಸಹಿತ ಕಾರ್ಯಾಗಾರಗಳನ್ನು ನಿರ್ಮಿಸಿಕೊಳ್ಳಲು ವಸತಿರಹಿತ ಫಲಾನುಭವಿಗಳಿಗೆ ಈ ಸೌಲಭ್ಯ ಕಲ್ಪಿಸಲಾಗುವುದು. ಇದರಿಂದ ಅವರು ನಿರಂತರ ಉದ್ಯೋಗದಲ್ಲಿ ತೊಡಗಿಸಿಕೊಂಡು ಅವರ ಜೀವನ ಮಟ್ಟ ಸುಧಾರಿಸಲು ಅನುಕೂಲವಾಗುತ್ತದೆ.
2009-10ನೇ ಸಾಲಿನಿಂದ 2014-15ನೇ ಸಾಲಿನವರೆಗೆ ಈ ಯೋಜನೆಯಡಿ ಕೈಮಗ್ಗ ಮತ್ತು ಜವಳಿ ಇಲಾಖೆಯಿಂದ ಅನುಷ್ಠಾನಗೊಳಿಸಿ ನೇಕಾರರಿಗೆ ವಸತಿ ಕಾರ್ಯಾಗಾರಗಳನ್ನು ನಿರ್ಮಿಸಿಕೊಡಲಾಗಿರುತ್ತದೆ. 2015-16 ನೇ ಸಾಲಿನಿಂದ ರಾಜೀವ್ ಗಾಂಧಿ ಗ್ರಾಮೀಣ ವಸತಿ ನಿಗಮದ ಮುಖಾಂತರ ನೇಕಾರರಿಗೆ ವಸತಿ ಕಾರ್ಯಾಗಾರಗಳನ್ನು ನಿರ್ಮಿಸಿಕೊಡಲಾಗುತ್ತ್ತಿದೆ.
2015-16ನೇ ಸಾಲಿನಿಂದ ಘಟಕ ವೆಚ್ಚ ರೂ.2.50 ಲಕ್ಷಗಳಲ್ಲಿ ಕೈಮಗ್ಗ ಮತ್ತು ಜವಳಿ ಇಲಾಖೆಯು ರೂ.1.00 ಲಕ್ಷ, ರಾಜೀವ್ ಗಾಂಧಿ ಗ್ರಾಮೀಣ ವಸತಿ ನಿಗಮವು ರೂ.1.20 ಲಕ್ಷಗಳ ಅನುದಾನ ಒದಗಿಸುತ್ತಿದೆ. ಫಲಾನುಭವಿಗಳು ತಮ್ಮ ವಂತಿಕೆ ರೂ.0.30 ಲಕ್ಷ ಭರಿಸಬೇಕಾಗಿರುತ್ತದೆ.
ನಿಗಧಿತ ನಮೂನೆಯಲ್ಲಿ ಅಗತ್ಯ ದಾಖಲಾತಿಗಳೊಂದಿಗೆ ವಸತಿ ರಹಿತ ನೇಕಾರರು ವಸತಿ ಕಾರ್ಯಾಗಾರಕ್ಕೆ ಅರ್ಜಿ ಸಲ್ಲಿಸಿದ ನಂತರ ಜಿಲ್ಲೆಯ ಉಪ / ಸಹಾಯಕ ನಿರ್ದೇಶಕರುಗಳು ಅರ್ಜಿಯನ್ನು ಪರಿಶೀಲಿಸಿ, ಸ್ಥಳ ಪರಿಶೀಲನೆ ನಡೆಸಿ ಅರ್ಹ ನೇಕಾರರನ್ನು ಸಂಬಂಧಿಸಿದ ವಿಭಾಗದ ಜಂಟಿ ನಿರ್ದೇಶಕರ ಅಧ್ಯಕ್ಷತೆಯಲ್ಲಿರುವ ಜಿಲ್ಲೆಯ ಕೈಮಗ್ಗ ಮತ್ತು ಜವಳಿ ಇಲಾಖೆ, ಸಮಾಜ ಕಲ್ಯಾಣ ಇಲಾಖೆ, ಸಹಕಾರ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯ ಅಧಿಕಾರಿಗಳನ್ನೊಳಗೊಂಡ ಜಿಲ್ಲಾ ಮಟ್ಟದ ಆಯ್ಕೆ ಸಮಿತಿಯಲ್ಲಿ ಮಂಡಿಸಿ ಆಯ್ಕೆ ಮಾಡಲಾಗುವುದು.